ಕ್ಷೀರಪಥ ಕೇಂದ್ರದಲ್ಲಿ ಕಪ್ಪುರಂಧ್ರ

7

ಕ್ಷೀರಪಥ ಕೇಂದ್ರದಲ್ಲಿ ಕಪ್ಪುರಂಧ್ರ

Published:
Updated:

ವಾಷಿಂಗ್ಟನ್ (ಪಿಟಿಐ): ಕ್ಷೀರಪಥದಲ್ಲಿ ಹೊಸ ಕಪ್ಪು ರಂಧ್ರದ ಕಾಯವನ್ನು ನಾಸಾದ `ಸ್ವಿಫ್ಟ್~ ಉಪಗ್ರಹ ಪತ್ತೆಹಚ್ಚಿದೆ. ಅಂತರಿಕ್ಷದ ಧನುರ್ ರಾಶಿಯ ತಾರಾಗುಚ್ಛದ ಭಾಗದಲ್ಲಿ ಕಂಡುಬಂದಿರುವ ಈ ಕಪ್ಪುರಂಧ್ರ ಎಷ್ಟು ದೂರದಲ್ಲಿದೆ ಎಂಬುದು ಇನ್ನೂ ನಿಖರವಾಗಿ ಗೊತ್ತಿಲ್ಲ.ಆದರೆ ಇದು 20,000ರಿಂದ 30,000 ಬೆಳಕಿನ ವರ್ಷಗಳಷ್ಟು ದೂರದಲ್ಲಿರಬಹುದೆಂದು ಅಂದಾಜಿಸಲಾಗಿದೆ.

ಅಧಿಕ ಶಕ್ತಿಯ `ಎಕ್ಸ್ ರೇ~ ಪ್ರವಾಹ ಕ್ಷೀರಪಥದ ಕೇಂದ್ರದೆಡೆಗೆ ಚಿಮ್ಮುತ್ತಿರುವುದನ್ನು ಉಪಗ್ರಹ ದಾಖಲಿಸಿತು. ಇದಾದ ನಂತರ ಏಕಾಏಕಿ ಎಕ್ಸ್ ರೇ ಪ್ರಕಾಶಮಾನವಾಗಿ ಬೆಳಗಿದ್ದುದನ್ನು ವಿಶ್ಲೇಷಣೆ ಮಾಡಿದ ನಂತರ ಕಪ್ಪುರಂಧ್ರ ಇರುವುದು ಖಚಿತಪಟ್ಟಿತು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry