ಕ್ಷೀರಭಾಗ್ಯ: ನಾಲ್ವರು ಮಕ್ಕಳು ಅಸ್ವಸ್ಥ

7

ಕ್ಷೀರಭಾಗ್ಯ: ನಾಲ್ವರು ಮಕ್ಕಳು ಅಸ್ವಸ್ಥ

Published:
Updated:

ಆಲೂರು: ಕ್ಷೀರಭಾಗ್ಯ ಯೋಜನೆ ಹಾಲು ಸೇವಿಸಿದ 4 ಮಕ್ಕಳು ಅಸ್ವಸ್ಥರಾದ ಘಟನೆ ತಾಲ್ಲೂಕಿನ ತೊಗರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ.ಪ್ರತಿದಿನದಂತೆ ಈ ದಿನವೂ ಮಕ್ಕಳಿಗೆ ಹಾಲು ವಿತರಿಸಲಾಯಿತು. 20ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ನಾಲ್ವರು ಮಕ್ಕಳು ಹಾಲು ಕುಡಿದ ಕೂಡಲೆ ವಾಂತಿ ಮಾಡಿಕೊಂಡು ಅಸ್ವಸ್ಥ­ರಾದರು. ಕೂಡಲೇ ಶಾಲೆಯ ಮುಖ್ಯ ಶಿಕ್ಷಕ ಅಸ್ವಸ್ಥಗೊಂಡ ಮಕ್ಕಳನ್ನು ಪೋಷಕರ ಸಹಾಯದಿಂದ ಆಲೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು.‘ಹಾಲಿನಲ್ಲಿ ಏನು ಬೆರೆತಿದೆ ಎಂಬ ಬಗ್ಗೆ ಈಗಲೇ ಹೇಳಲಾಗುವುದಿಲ್ಲ, ಮಕ್ಕಳು ಕುಡಿದ ಹಾಲನ್ನು ಪ್ರಯೋ­ಗಾಲಯಕ್ಕೆ ಕಳುಹಿಸ­ಲಾಗುವುದು. ವರದಿ ಬಂದ ನಂತರ ಕಾರಣ ತಿಳಿಯುತ್ತದೆ’ ಎಂದು ಮಕ್ಕಳಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.ಶಾಸಕ ಎಚ್.ಕೆ. ಕುಮಾರಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಕೆ. ಪುಷ್ಪಲತಾ, ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಆರ್‌. ನಟರಾಜ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ  ಕೆ.ಎಸ್. ಮಂಜೇಗೌಡ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry