ಬುಧವಾರ, ನವೆಂಬರ್ 20, 2019
24 °C
ಅಪಪ್ರಚಾರವನ್ನು ಜನ ನಂಬುವುದಿಲ್ಲ

ಕ್ಷೇತ್ರದ ಅಭಿವೃದ್ಧಿಯಷ್ಟೇ ನನ್ನಗುರಿ: ಪ್ರಮೋದ್

Published:
Updated:
ಕ್ಷೇತ್ರದ ಅಭಿವೃದ್ಧಿಯಷ್ಟೇ ನನ್ನಗುರಿ: ಪ್ರಮೋದ್

>ಉಡುಪಿ: `ಬಿಜೆಪಿಯವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರ ಸುಳ್ಳುಗಳನ್ನು ನಂಬಲು ಉಡುಪಿ ಕ್ಷೇತ್ರದ ಜನ ಮೂರ್ಖರಲ್ಲ' ಎಂದು ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.ಉಡುಪಿಯ ಚಿತ್ತರಂಜನ್ ವೃತ್ತದಲ್ಲಿ ಬುಧವಾರ ನಡೆದ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು.`ಕಳೆದ ಎರಡು ಚುನಾವಣೆಯಲ್ಲಿಯೂ ಬಿಜೆಪಿ ನನ್ನ ವಿರುದ್ಧ ಅಪಪ್ರಚಾರ ಮಾಡಿತ್ತು. ಈ ಬಾರಿಯೂ ಅದನ್ನೇ ಮಾಡುತ್ತಿದೆ. ಆದರೆ ಬಿಜೆಪಿಯವರು ಹೇಳುವ ಸುಳ್ಳುಗಳನ್ನು ನಂಬವಷ್ಟು ಜನರು ಮೂರ್ಖರಲ್ಲ. ಬಿಜೆಪಿ ಇದನ್ನು ನಿಲ್ಲಿಸದಿದ್ದರೆ ಅವರ ಬಗ್ಗೆ ನಾನು ಸತ್ಯ ಹೇಳಬೇಕಾಗುತ್ತದೆ' ಎಂದು ಅವರು ಎಚ್ಚರಿಕೆ ನೀಡಿದರು.ವಿರೋಧ ಪಕ್ಷದವರ ಬಗ್ಗೆ ಟೀಕೆ ಮಾಡುವುದಾದರೆ ದಿನವೆಲ್ಲ ಮಾಡಬಹುದು. ನನಗೆ ಅದು ಬೇಕಾಗಿಲ್ಲ. ಉಡುಪಿ ಕ್ಷೇತ್ರದ ಅಭಿವೃದ್ಧಿಗಷ್ಟೇ ನನ್ನ ಚಿಂತನೆ. ಕಳೆದ ಒಂದು ವರ್ಷದಿಂದ ಜನರ ಮನೆ ಬಾಗಿಲಿಗೆ ಹೋಗಿ ಅವರ ಕಷ್ಟ- ಸುಖಗಳಲ್ಲಿ ಭಾಗಿಯಾಗಿದ್ದೇನೆ. ಜನರ ಸಮಸ್ಯೆಗಳೇನು ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ಮುಂದಿನ ದಿನಗಳಲ್ಲಿ ಉಡುಪಿ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳಿರಬಾರದು ಎಂಬುದು ನನ್ನ ಸಂಕಲ್ಪ ಎಂದು ಅವರು ಹೇಳಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಯೋಜನೆ ಮತ್ತು ಸವಲತ್ತುಗಳನ್ನು ಜನರಿಗೆ ತಲುಪಿಸುವುದು ನನ್ನ ಉದ್ದೇಶ ಎಂದರು. ಬಡವರ ಕಲ್ಯಾಣವನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪ್ರಣಾಳಿಕೆ ರೂಪಿಸಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಪಕ್ಷ ಪ್ರಾಮಾಣಿಕವಾಗಿ ದುಡಿಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದ್ದು ಪಕ್ಷ ಅಧಿಕಾರಕ್ಕೆ ಬರಲಿದೆ. ಯಾವ ಉದ್ದೇಶದಿಂದ ಮಹಾತ್ಮ ಗಾಂಧೀಜಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರೋ ಆ ಉದ್ದೇಶವನ್ನು ಈಡೇರಿಸುವುದು ನಮ್ಮ ಆದ್ಯತೆ  ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದರು.ಯಾರೂ ಮಾಡದನ್ನು ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಆಡಳಿತ ಅವಧಿಯಲ್ಲಿ ಮಾಡಿದ್ದನ್ನು ನಾವೆಲ್ಲ ನೋಡಿದ್ದೇನೆ. ನಾವು ಅವರಂತೆ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಅವರು ಟೀಕಿಸಿದರು.

ಜೋಡುಗಟ್ಟೆಯಿಂದ ಚಿತ್ತರಂಜನ್ ವೃತ್ತದ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮುಖಂಡರಾದ ಬಿರ್ತಿ ರಾಜೇಶ್ ಶೆಟ್ಟಿ, ದಿವಾಕರ ಕುಂದರ್, ಎಂ.ಎ.ಗಫೂರ್, ಬಿ.ಪಿ. ರಮೇಶ್ ಪೂಜಾರಿ, ಯತೀಶ್ ಕರ್ಕೆರಾ, ಕೇಶವ ಕೋಟ್ಯಾನ್, ಅಮೃತ್ ಶೆಣೈ, ಚಿತ್ತರಂಜನ್‌ದಾಸ್ ಹೆಗ್ಡೆ, ವೆರೋನಿಕ ಕರ್ನೆಲಿಯೊ, ಮೀನಾಕ್ಷಿ ಮಾಧವ, ಎಸ್. ನಾರಾಯಣ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)