ಕ್ಷೇತ್ರಮಟ್ಟದ ಜನಶಕ್ತಿ ಸಮಾವೇಶ

7

ಕ್ಷೇತ್ರಮಟ್ಟದ ಜನಶಕ್ತಿ ಸಮಾವೇಶ

Published:
Updated:

ಮೊಳಕಾಲ್ಮುರು: ಪಟ್ಟಣದಲ್ಲಿಜ. 6ರಂದು ಮಾದಿಗ ಜನಾಂಗದಕ್ಷೇತ್ರಮಟ್ಟದ ಜನಶಕ್ತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಮುಖ್ಯಸ್ಥ ಡಿ. ಮೊರಾರ್ಜಿ ಹೇಳಿದರು.



ಇಲ್ಲಿ ಈ ಹಿನ್ನೆಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಹುದಿನಗಳ ನಂತರ ಮಾದಿಗ ಜನಾಂಗದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಆದ ಕಾರಣ ಜನಾಂಗದ ಎಲ್ಲರೂ ಪಕ್ಷಬೇಧ ಮರೆತು ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಜನಾಂಗದ ಸಂಘಟನೆ, ಶಕ್ತಿ ಪ್ರದರ್ಶನ ಮಾಡಬೇಕಿದೆ. ಎಲ್ಲರೂ ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.



ಸಮಾವೇಶಕ್ಕೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ನಾರಾಯಣ ಸ್ವಾಮಿ ಮತ್ತು ಮಾದಿಗ ಜನಾಂಗದ ಶಾಸಕರು ಮತ್ತು ರಾಜಕೀಯ ಧುರೀಣರನ್ನು ಆಹ್ವಾನಿಸಲಾಗುವುದು ಎಂದು ಮೊರಾರ್ಜಿ ತಿಳಿಸಿದರು.

ಮುಖಂಡರಾದ ಕೆ. ತಿಪ್ಪೇಸ್ವಾಮಿ, ರಾಯಾಪುರ ನಾಗೇಂದ್ರಪ್ಪ, ಕೆರೆಕೊಂಡಾಪುರ ಪರಮೇಶ್ವರಪ್ಪ, ಬಿ.ಟಿ. ನಾಗಭೂಷಣ್, ರಾಜಣ್ಣ, ಯಶವಂತರಾಜ್, ಏಕಾಂತಪ್ಪ ಉಪಸ್ಥಿತರಿದ್ದರು.



ಇಂದು ಕಾರ್ಡ್ ವಿತರಣೆ

ಮೊಳಕಾಲ್ಮುರು: ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಡಿ. 26ರಂದು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ವತಿಯಿಂದ ಕಂಬಳಿ, ರೇಷ್ಮೆ, ಉಲ್ಲನ್ ನೇಕಾರರಿಗೆ ಕಾರ್ಡ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.



ಗ್ರಾಮದ ಸಾಲೇಶ್ವರ ದೇವಸ್ಥಾನ ಅವರಣದಲ್ಲಿ 11ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

ಮುಂದಿನ ದಿನಗಳಲ್ಲಿ ನೇಕಾರರಿಗೆ ಕಚ್ಛಾವಸ್ತುಗಳನ್ನು ಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಕಾರ್ಡ್ ವಿತರಣೆ ಮಾಡಲಾಗುತ್ತಿದೆ.



ಅರ್ಹ ನೇಕಾರರು ತಪ್ಪದೇ ಭಾಗವಹಿಸಬೇಕು ಎಂದು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ವ್ಯವಸ್ಥಾಪಕ ಪಾರ್ಥವನ್ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry