ಕ್ಷೇತ್ರ ಅಭಿವೃದ್ಧಿಗೆ ಯತ್ನ: ಪರಮೇಶ್ವರ್

7

ಕ್ಷೇತ್ರ ಅಭಿವೃದ್ಧಿಗೆ ಯತ್ನ: ಪರಮೇಶ್ವರ್

Published:
Updated:

ಕೊರಟಗೆರೆ: ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ಡಾ.ಜಿ. ಪರಮೇಶ್ವರ್ ತಿಳಿಸಿದರು.ತಾಲ್ಲೂಕಿನ ಸಿ.ಎನ್.ದುರ್ಗ ಹೋಬ ಳಿ ವ್ಯಾಪ್ತಿಯಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಜನರ ಹಿತದೃಷ್ಟಿಯಿಂದ ಪಕ್ಷ ಬೇಧ ಮಾಡದೇ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಗಮನ ಹರಿಸಬೇಕು.

 

ಸರ್ಕಾರದ ಮಲತಾಯಿ ಧೋರಣೆ ಯಿಂದ ನಮ್ಮ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಣ ನೀಡದ ಕಾರಣ ಅಭಿವೃದ್ಧಿಯಾಗಿಲ್ಲ. ತುಮಕೂರು ತಾಲ್ಲೂಕಿಗೆ ಕೋಟಿ ಗಟ್ಟಲೆ ಹಣ ನೀಡಿರುವ ಸರ್ಕಾರ ನಮ್ಮ ಕ್ಷೇತ್ರವನ್ನು ಕಡೆಗಣಿಸಿದೆ ಎಂದು ಆಪಾದಿಸಿದರು.ರಸ್ತೆ ಅಭಿವೃದ್ಧಿಗಾಗಿ ಪಾದಯಾತ್ರೆ ಮಾಡಿದರೂ ಯಾವುದೇ ಕ್ರಮಕೈಗೊಂ ಡಿಲ್ಲ. ಬರಪೀಡಿತ ಪ್ರದೇಶವಾದ ಈ ಭಾಗದಲ್ಲಿ ನೀರಾವರಿಗೆ ಹೋರಾಟ ಮಾಡುವ ಅಗತ್ಯವಿದೆ. 2002ರಲ್ಲಿ ಕಾಂಗ್ರೆಸ್ ಭದ್ರಾ ನೀರಾವರಿಗೆ ಯೋಜನೆ ರೂಪಿಸಿತ್ತು. ಯೋಜನೆ ಪೂರ್ಣಗೊಂಡರೆ ಈ ಭಾಗದ 19 ಕೆರೆಗಳಿಗೆ ನೀರು ಒದಗಿಸಬಹುದು. ಆದರೆ ಸರ್ಕಾರ ನೀರಾವರಿ ಯೋಜನೆಗಳ ಬಗ್ಗೆ ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಡಿ. ಪ್ರಸನ್ನಕುಮಾರ್, ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷೆ ಸುಕನ್ಯಾ ಮಂಜುನಾಥ್, ಸದಸ್ಯರಾದ ಜಿ.ಎಸ್.ರವಿಕುಮಾರ್, ಜಿ.ಎಲ್. ಹನುಮಂತರಾಯಪ್ಪ, ಲೋಕೇಶ್, ಅಗ್ರಹಾರ ಗ್ರಾ.ಪಂ. ಅಧ್ಯಕ್ಷೆ ಕೆಂಪಕ್ಕ, ತಹಶೀಲ್ದಾರ್ ವಿ. ಪಾತರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಎಪಿಎಂಸಿ ಸದಸ್ಯ ವಿಜಿಕುಮಾರ್, ಮುಖಂಡರಾದ ಎ.ಡಿ. ಬಲರಾಮಯ್ಯ, ಕರಿಯಪ್ಪ, ಅಶ್ವತ್ಥ ನಾರಾಯಣರಾಜು, ಗಂಗಾಧ ರಪ್ಪ, ಮೈಲಾರಪ್ಪ, ಮಯೂರ ಗೋವಿಂದರಾಜು, ಸಂಜೀವರೆಡ್ಡಿ ಇತರರು ಉಪಸ್ಥಿತರಿದ್ದರು.ಸಂತಾಪ: ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್  ಸಂತಾಪ ಸೂಚಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry