ಸೋಮವಾರ, ಅಕ್ಟೋಬರ್ 21, 2019
26 °C

ಕ್ಷೌರಿಕರನ್ನು ಎಸ್.ಸಿ. ಪಟ್ಟಿಗೆ ಸೇರಿಸಿ

Published:
Updated:

ಕ್ಷೌರಿಕ ವೃತ್ತಿ ಆಧಾರಿತ ಜಾತಿಗಳಾದ ಹಡಪದ, ಸವಿತಾ, ಕಾಯಕ ಇತರೆ ಹೆಸರಿನಿಂದ ಕರೆಯುವ ಸಮುದಾಯದ ಜನರು ಶತಮಾನಗಳಿಂದಲೂ ಸಮಾಜದ ಜಾತಿ ನಿಂದನೆ, ಅಸ್ಪೃಶ್ಯತೆ, ಕೀಳರಿಮೆಯಿಂದ ತುಳಿತಕ್ಕೆ ಒಳಗಾಗುತ್ತ ಬಂದಿದ್ದಾರೆ.

 

ದುರಂತದ ಸಂಗತಿ ಕೆಳ ವರ್ಗಗಳ ಜನರೂ ಕ್ಷೌರಿಕರನ್ನು ಕೀಳಾಗಿ ಕಾಣುತ್ತಾರೆ. ಅದಕ್ಕೆ ಕಾರಣ ಅವರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ದುಃಸ್ಥಿತಿ. ಸರ್ಕಾರಕ್ಕೆ ಈ ಬೆಳವಣಿಗೆ ಗೊತ್ತಿದೆ. ಆದರೂ ಜಾಣ ಕುರುಡು ನೀತಿ ಅನುಸರಿಸುತ್ತಿದೆ. ಈ ಸಮಾಜದ ಜನರಿಗೆ ಪರಿಶಿಷ್ಟ ಜಾತಿ ಸ್ಥಾನ ನೀಡಿ, ಸಾಮಾಜಿಕ ಶೋಷಣೆಯನ್ನು ತಪ್ಪಿಸಬೇಕು ಎಂದು ವಿನಂತಿಸುತ್ತೇನೆ.

 

Post Comments (+)