ಖದೀಮರು ಚಿತ್ರಕ್ಕೆ ಚಾಲನೆ

7

ಖದೀಮರು ಚಿತ್ರಕ್ಕೆ ಚಾಲನೆ

Published:
Updated:

ಅಮರ್‌ಚಂದ್ ಜೈನ್ ಹಾಗೂ ವಿಜಯ್ ಸುರಾನ ನಿರ್ಮಿಸುತ್ತಿರುವ ‘ಖದೀಮರು’ ಚಿತ್ರ ಬೆಂಗಳೂರಿನ ಕೃಷ್ಣಕುಮಾರಿ ಎಸ್ಟೇಟ್‌ನಲ್ಲಿ ಆರಂಭವಾಯಿತು.ನಾಯಕಿ ನಾಯಕನ ಬಳಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವ ಪ್ರಥಮ ಸನ್ನಿವೇಶಕ್ಕೆ ಅಶೊಕ್ ಸುರಾನ ಆರಂಭ ಫಲಕ ತೋರಿದರು.ಮಹೇಶ್ ಕೊಠಾರಿ ಕ್ಯಾಮೆರಾ ಚಾಲನೆ ಮಾಡಿದರು. ನಟ ರಮೆಶ್‌ಅರಂವಿಂದ್ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಾಯಕಿ ಮಾಧುರಿ ಹಾಗೂ ನಾಯಕ ತಿಲಕ್ ಮೊದಲ ಸನ್ನಿವೇಶದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.ಹ.ಸೂ.ರಾಜಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಎಂ.ಎಸ್.ಮಾರುತಿ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಬಾಬುಖಾನ್ ಕಲಾನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಇದೆ. ಚಿತ್ರದ ತಾರಾಬಳಗದಲ್ಲಿ ದೀಪಕ್, ತಿಲಕ್, ಅಜಿತ್, ಅಮಿತ್, ನವೀನ್, ಮಾಧುರಿ, ನಯನಾ, ಆದಿಲೋಕೇಶ್, ಎಂ.ಎಸ್.ಉಮೇಶ್, ಶೋಭ್‌ರಾಜ್, ಬ್ಯಾಂಕ್ ಜನಾರ್ದನ್, ಪದ್ಮಾ ವಾಸಂತಿ, ಪ್ರತಾಪ್ ಮುಂತಾದವರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry