ಖರೀದಿಗೂ ಮುನ್ನ ಬೆಲೆ ನಿಗದಿ ಮಾಡಿ

7

ಖರೀದಿಗೂ ಮುನ್ನ ಬೆಲೆ ನಿಗದಿ ಮಾಡಿ

Published:
Updated:

ಗುಲ್ಬರ್ಗ: ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಮಾಡಿದ ನಂತರವಷ್ಟೇ ರೈತರಿಂದ ತೊಗರಿ ಖರೀದಿ ಮಾಡಬೇಕು ಎಂದು ಕರ್ನಾಟಕ ಪ್ರದೇಶ ತೊಗರಿ ಬೆಳೆಗಾರರ ಸಂಘ ಸರ್ಕಾರವನ್ನು ಆಗ್ರಹಿಸಿದೆ.“ಕೇಂದ್ರ ಸರ್ಕಾರ ಕ್ವಿಂಟಲ್‌ಗೆ 3000 ರೂಪಾಯಿ ಕನಿಷ್ಠ ಬೆಂಬಲ ಬೆಲೆಗೆ ಘೋಷಿಸಿದ್ದು, ಇದಕ್ಕೆ ಶೇ 25ರಷ್ಟನ್ನು ಸೇರಿಸಿ ಆ ಬೆಲೆಗೆ ತೊಗರಿ ಖರೀದಿಸಬೇಕು” ಎಂದು ಸಂಘದ ಅಧ್ಯಕ್ಷ ಬಸವರಾಜ ಇಂಗಿನ ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತೊಗರಿ ಮಂಡಳಿ ಅಧಿಕಾರಿಗಳ ಜತೆ ನಡೆಸಿದ ಚರ್ಚೆಯ ಪರಿಣಾಮವಾಗಿ ರಾಜ್ಯ ಸರ್ಕಾರವು ತೊಗರಿ ಖರೀದಿಸಲು ಆದೇಶ ಹೊರಡಿಸಿದೆ.ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ 30,000 ಟನ್ ಹಾಗೂ ತೊಗರಿ ಮಂಡಳಿಯು 1,000 ಟನ್ ತೊಗರಿ ಖರೀದಿಸುವಂತೆ 2010ರ ಡಿ. 27ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಆದರೆ ಸೂಕ್ತ ಬೆಲೆ ನಿಗದಿ ಮಾಡದೇ ಖರೀದಿ ಮಾಡಿದರೆ ರೈತರಿಗೆ ಪ್ರಯೋಜನವಾಗುವುದಿಲ್ಲ ಎಂದು ಇಂಗಿನ ವಿವರಿಸಿದರು.“ತೊಗರಿ ಮಂಡಳಿಯಲ್ಲಿ ಸಿಬ್ಬಂದಿ ಇಲ್ಲ ಎಂದು ಅಧ್ಯಕ್ಷರು ಹೇಳುತ್ತಿದ್ದಾರೆ. ಮಂಡಳಿಯಲ್ಲಿ ಸಾಕಷ್ಟು ಹಣವಿದ್ದರೂ ರೈತರಿಗೆ ಅದು ನೆರವು ನೀಡುತ್ತಿಲ್ಲ. ಕಳೆದ ವರ್ಷ ರೂ 4,500 ಬೆಂಬಲ ಬೆಲೆ ಇತ್ತು. ಆದರೆ ಈ ವರ್ಷ ಕೇಂದ್ರ ಘೋಷಿಸಿದ ರೂ 3,000 ಬೆಂಬಲ ಬೆಲೆಯ ಜತೆಗೆ ಇನ್ನೂ 500 ರೂಪಾಯಿ ಸೇರಿಸಿ ದರ ನಿಗದಿ ಮಾಡಬೇಕು” ಎಂದು ಇಂಗಿನ ಆಗ್ರಹಿಸಿದರು.ನೆರೆ ಜಿಲ್ಲೆ ವಿಜಾಪುರದಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ 3,500 ರೂಪಾಯಿ ಬೆಲೆ ನಿಗದಿ ಮಾಡಿ, ರೈತರಿಂದ ಖರೀದಿ ನಡೆಸಲಾಗುತ್ತಿದೆ. ಆದರೆ ಗುಲ್ಬರ್ಗ ಜಿಲ್ಲೆಯಲ್ಲಿ ಬೆಲೆ 3,000 ರೂಪಾಯಿಗಿಂತ ಸ್ವಲ್ಪ ಹೆಚ್ಚಿರುವ ಕಾರಣದಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ತೊಗರಿಯನ್ನು ಖರೀದಿಸಲು ಮುಂದಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry