ಖಳನಾಯಕ ಪಾತ್ರದ ನಿರೀಕ್ಷೆಯಲ್ಲಿ ರಣಬೀರ್

7

ಖಳನಾಯಕ ಪಾತ್ರದ ನಿರೀಕ್ಷೆಯಲ್ಲಿ ರಣಬೀರ್

Published:
Updated:
ಖಳನಾಯಕ ಪಾತ್ರದ ನಿರೀಕ್ಷೆಯಲ್ಲಿ ರಣಬೀರ್

ಪಕ್ಕದ ಮನೆ ಹುಡುಗನ ಇಮೇಜ್‌ನಿಂದ ಹೊರಬರಲು ನಿರ್ಧರಿಸಿರುವ ನಟ ರಣಬೀರ್ ಕಪೂರ್, ಖಳನಾಯಕನ ಪಾತ್ರದ ನಿರೀಕ್ಷೆಯಲ್ಲಿದ್ದಾರೆ. ಮೊಗ್ಯಾಂಬೊ ಪಾತ್ರವನ್ನು ಬಹುವಾಗಿ ಮೆಚ್ಚುವ ಅವರು ಖಳನಾಯಕನ ಪಾತ್ರದಲ್ಲೊಂದು ಥ್ರಿಲ್ ಕಂಡುಕೊಂಡಿದ್ದಾರಂತೆ. ಕೈತುಂಬಾ ಹಣ, ವಿಲಾಸಿ ಜೀವನ ಹಾಗೂ ಸುತ್ತಲೂ ಮುತ್ತಿಕೊಂಡ ಅಂಗನೆಯರ ನಡುವೆ ಕಾಲ ಕಳೆಯುವ ಖಳನಾಯಕರ ಪಾತ್ರ ಅವರನ್ನು ಸೆಳೆದಿದೆಯಂತೆ.`ಚಿತ್ರದ ಆರಂಭದಿಂದ ಅಂತ್ಯದವರೆಗೂ ಶ್ರೀಮಂತ ಜೀವನ ಸಾಗಿಸುವ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬುದು ನನ್ನ ಬಹು ದಿನಗಳ ಬಯಕೆ. ಆದರೆ ಅಂತ್ಯದಲ್ಲಿ ನಾಯಕನಿಂದ ಒದೆ ತಿನ್ನುವುದು ಬೇಸರದ ಸಂಗತಿ' ಎಂದಿರುವ ರಣಬೀರ್ ಕಪೂರ್ ತಾವು ಸಲ್ಮಾನ್ ಖಾನ್, ಅಜಯ್ ದೇವಗನ್ ಹಾಗೂ ಅಕ್ಷಯ್ ಕುಮಾರ್ ಅವರಂತೆ ರಿಮೇಕ್ ಚಿತ್ರಗಳನ್ನು ಮಾಡುವ ಹಾದಿಯಲ್ಲಿ ಸಾಗಲು ಇಷ್ಟಪಡುವುದಿಲ್ಲ ಎಂದೂ ಮಾತು ಸೇರಿಸಿದ್ದಾರೆ.`ನನಗೆ ರಿಮೇಕ್‌ನಲ್ಲಿ ನಂಬಿಕೆ ಇಲ್ಲ. ನಮ್ಮಲ್ಲೇ ಉತ್ತಮ ಕಥೆಗಳು ತಯಾರಾಗುತ್ತಿರುವಾಗ ಮತ್ತೊಬ್ಬರ ಚಿತ್ರವನ್ನು ಮರು ನಿರ್ಮಿಸುವುದರಲ್ಲಿ ಅರ್ಥವಿಲ್ಲ. ನನ್ನ ತಂದೆ ಅಥವಾ ಅಮಿತಾಬ್ ನಟಿಸಿರುವ ಚಿತ್ರಗಳನ್ನು ಮರುಸೃಷ್ಟಿ ಮಾಡಿದಲ್ಲಿ ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತೇನೆ ಎಂಬ ನಂಬಿಕೆಯೂ ನನಗಿಲ್ಲ' ಎಂಬ ಅಭಿಪ್ರಾಯ ಅವರದ್ದು.ರಣಬೀರ್ ತಮ್ಮ ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆ ಅವರೊಂದಿಗೆ ನಟಿಸಿರುವ `ಯೆ ಜವಾನಿ ಹೈ ದಿವಾನಿ' ಚಿತ್ರ ಬಿಡುಗಡೆ ಆಗಬೇಕಿದೆ. ಅಭಿನವ್ ಕಶ್ಯಪ್ ಅವರ `ಬೇಷರಮ್' ಹಾಗೂ ಅನುರಾಗ್ ಕಶ್ಯಪ್ ಅವರ `ಬಾಂಬೆ ವೆಲ್ವೆಟ್' ಚಿತ್ರಗಳು ಸಿದ್ಧಗೊಳ್ಳುತ್ತಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry