ಖಾತರಿ ಕೂಲಿಗಾಗಿ ಉಪವಾಸ ಸತ್ಯಾಗ್ರಹ

7

ಖಾತರಿ ಕೂಲಿಗಾಗಿ ಉಪವಾಸ ಸತ್ಯಾಗ್ರಹ

Published:
Updated:
ಖಾತರಿ ಕೂಲಿಗಾಗಿ ಉಪವಾಸ ಸತ್ಯಾಗ್ರಹ

ಕುಷ್ಟಗಿ: ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನಿರ್ವಹಿಸಿದ್ದರೂ ಅಧಿಕಾರಿಗಳು ಕೂಲಿ ಪಾವತಿಸಲು ಸತಾಯಿಸುತ್ತಿದ್ದಾರೆ ಎಂದು ದೂರಿದ ತಾಲ್ಲೂಕಿನ ತಳುವಗೇರಾದಲ್ಲಿನ ಕೃಷಿ ಕೂಲಿಕಾರರು ಅಲ್ಲಿಯ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗುರುವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.ಸಿಪಿಎಂ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿವರೆಗೆ ಮೆರವಣಿಗೆ ನಡೆಸಿದ ನಂತರ ದ್ಯಾಮನಗೌಡ ಪಾಟೀಲ, ರಾಚಪ್ಪ ಬಂಡಿ, ಮಲ್ಲಿಕಾರ್ಜುನಗೌಡ ಅಯ್ಯಪ್ಪಗೌಡ್ರ ಎಂಬ ಕಾರ್ಮಿಕರು ಉಪವಾಸ ಸತ್ಯಾಗ್ರಹ ನಡೆಸಿದರು.ಪ್ರಾಂತ ರೈತ ಸಂಘದ ಮುಖಂಡ ಆರ್.ಕೆ.ದೇಸಾಯಿ ಮಾತನಾಡಿ, 2011-12ನೇ  ವರ್ಷದಲ್ಲಿ ಪರಿಶಿಷ್ಟರ ಕಾಲೊನಿಯಿಂದ ಗ್ರಾ.ಪಂ ವರೆಗೆ ಚರಂಡಿ ಕೆಲಸ ನಿರ್ವಹಿಸಲಾಗಿದ್ದು 288 ಮಾನವ ದಿನ ಸೃಷ್ಟಿಯಾಗಿದ್ದವು. ಆದರೆ ಪರಿಶೀಲನೆ ನಡೆಸಿದ ಸ್ವತಂತ್ರ ತಂಡ ಕೇವಲ ರೂ. 3,168 ಕೆಲಸ ನಡೆದಿರುವುದಾಗಿ ವರದಿ ನೀಡಿತ್ತು. ಎಲ್ಲ ಕಾರ್ಮಿಕರಿಗೆ ಈ ಲೆಕ್ಕದಲ್ಲಿ ಕೂಲಿ ಹಂಚಿಕೆ ಮಾಡಿದರೆ ಒಬ್ಬರಿಗೆ ಕೇವಲ ರೂ. 21 ಮಾತ್ರ ದೊರೆಯುತ್ತದೆ. ಇದೆಂಥ ವಿಪರ್ಯಾಸ ಎಂದರು.ಗ್ರಾಮದ ಕೆರೆ ಹೂಳು ತೆಗೆಸುವುದಕ್ಕೆ ಮುಂದಾದಾಗ ಜಮೀನು ಮುಳುಗಡೆ ರೈತರು ಕೆಲಸವನ್ನು ಸ್ಥಗಿತಗೊಳಿಸಿದ್ದರೂ ತಲಾ 952 ಮತ್ತು 882 ಮಾನವ ದಿನ ಸೃಷ್ಟಿಸಿ ಕೆಲಸ ನೀಡಿರುವುದಾಗಿ ಅಧಿಕಾರಿಗಳು ದಾಖಲೆ ಸೃಷ್ಟಿಸಿ ಒಟ್ಟು 2.29 ಲಕ್ಷ ರೂಪಾಯಿ ಗುಳುಂ ಮಾಡುವ ಮತ್ತು ಇದೇ ರೀತಿ ಇನ್ನೊಂದು ಚರಂಡಿ ನಿರ್ಮಾಣದ ಹೆಸರಿನಲ್ಲಿ ಬೋಗಸ್ ಬಿಲ್ ಸೃಷ್ಟಿಸುವ ಹುನ್ನಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದರು. ಫಕೀರಪ್ಪ ಮಡಿವಾಳರ, ಬಸಪ್ಪ ಹುನುಗುಂದ, ರಂಗಪ್ಪ ಗುರಿಕಾರ, ಚನ್ನನಗೌಡ ಪಾಟೀಲ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry