ಗುರುವಾರ , ಜೂನ್ 17, 2021
27 °C

ಖಾತೆ ಮಂಜೂರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ಬಸವ ಇಂದಿರಾ ಆವಾಸ ಯೋಜನೆಯಡಿ ಆಯ್ಕೆಯಾದ (ಗುಡಿಸಲು) ಫಲಾನುಭವಿಗಳ ಹೆಸರಿ ನಲ್ಲಿ ಖಾತೆ ಮಂಜೂರಿ ಮಾಡ ಬೇಕು ಎಂದು ಒತ್ತಾಯಿಸಿ ಅಡರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದಗಟ್ಟಿ ತಾಂಡಾದ  ನಿವಾಸಿಗಳು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಸದರಿ ಯೋಜನೆಯಡಿ 223 ಫಲಾನುಭವಿಗಳು ಆಯ್ಕೆಯಾಗಿದ್ದರು. ಸರ್ಕಾರದಿಂದ 50 ಸಾವಿರ ಸಬ್ಸಿಡಿ ಹಣವನ್ನು ಫಲಾನುಭವಿಗಳ ಹೆಸರಿನಲ್ಲಿ ರಾಜೀವ ಗಾಂಧಿ ವಸತಿ ನಿಗಮದವರು ತಯಾರಿಸಿದ ಖಾತೆಗೆ ಜಮೆ ಆಗ ಬೇಕಿತ್ತು. ಆದರೆ ಇಷ್ಟು ದಿನ ಕಳೆದರೂ ಖಾತೆಯೇ ಆಗಿಲ್ಲ. ಯೋಜನೆಯಲ್ಲಿ ಹೇಗಾದರೂ ಹಣ ಬರುತ್ತದೆ.

 

ನಂಬಿದ ಫಲಾನುಭವಿಗಳು ಸ್ವಂತ ಹಣದಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

   ಈಗಾಗಲೆ ಮೂರು ಹಂತದಲ್ಲಿ ಮನೆ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಆದರೆ ಫಲಾನುಭವಿಗಳ ಹೆಸರಿನಲ್ಲಿ ಖಾತೆ ಆಗದೆ ಇರುವುದರಿಂದ ಸರ್ಕಾರದ ಯಾವುದೇ ಅನುದಾನ ಬಂದಿಲ್ಲ. ಹೀಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿರುವ ಬಡವರು ಅನುದಾನ ದೊರೆಯದೆ ಪರದಾಡುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಖಾತೆ ತೆರೆಯಲು ಅಗತ್ಯದ ಎಲ್ಲ ದಾಖಲೆಗಳನ್ನು ಪಂಚಾಯಿತಿ ನೀಡಿದ್ದೇವೆ. ಆದರೆ ಅಧಿಕಾರಿಗಳ ಬೇಜ ವಾಬ್ದಾರಿಯಿಂದಾಗಿ ಇನ್ನೂ ಖಾತೆ ಆಗಿಲ್ಲ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯಿತಿ ಅಭಿವೃದ್ಧಿ ಅನುದಾನ ದಲ್ಲಿ ಎಸ್‌ಸಿ/ಎಸ್‌ಟಿ ಪಂಗಡದವರಿಗೆ ಮೀಸಲಾದ ಶೇ.22.75 ಹಣವನ್ನು ಸರಿಯಾಗಿ ವಿತರಣೆ ಮಾಡಿಲ್ಲ. ಮತ್ತು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ವಾಗಿಲ್ಲ ಎಂದು ದೂರಿದರು.ಜನತೆ ಕೆಲಸ ಹುಡುಕಿಕೊಂಡು ಬೇರೆ ಊರಿಗೆ ಹೋಗುತ್ತಿದ್ದಾರೆ~ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿ, `ಶೇ.22.75 ಅನುದಾನದ ಹಂಚಿಕೆ ಯಲ್ಲಿ ಯಾವುದೇ ತಾರತಮ್ಯ ಆಗಿಲ್ಲ. ಈ ಬಾರಿ ಅನುದಾನದ ಹಣದಲ್ಲಿ ಎಸ್‌ಸಿ/ಎಸ್‌ಟಿ ಮಕ್ಕಳಿಗೆ ಕಂಪ್ಯೂಟರ್ ಕಲಿಸುವ ಗುರಿ ಹಾಕಿಕೊಳ್ಳಲಾಗಿದೆ~ ಎಂದು ತಿಳಿಸಿದರು.ತಾಲ್ಲೂಕು ಪಂಚಾಯಿತಿ ಯೋಜನಾ ಧಿಕಾರಿ ಉಪ್ಪಿನ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟ ನಾಕಾರರನ್ನು ಉದ್ದೇಶಿಸಿ `ತಾಂಡಾ ನಿವಾಸಿಗಳ ಸಮಸ್ಯೆಗಳನ್ನು ಗಂಭೀರ ವಾಗಿ ಪರಿಗಣಿಸಿದ್ದು ಪಂಚಾತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಿ ಸೂಕ್ತಕ್ರಮ ಕೈಗೊಳ್ಳ ಲಾಗು ವುದು~ ಎಂದು ತಿಳಿಸಿದರು.ಡಿ.ಡಿ. ಲಮಾಣಿ, ಆರ್.ಎಸ್. ಲಮಾಣಿ, ಕುಮಾರ ಲಮಾಣಿ, ವೈ.ಎಂ. ಸೋಮಸಿಂಗ್, ಎ.ಎಸ್. ಲಮಾಣಿ, ಅರ್ಜುನ ಲಮಾಣಿ, ರಾಮಪ್ಪ ಲಮಾ ಣಿ, ಶೇಕಪ್ಪ ಲಮಾಣಿ, ಗೋವಿಂದಪ್ಪ ಲಮಾಣಿ, ಅಶೋಕ ಲಮಾಣಿ ಸೇರಿದಂತೆ ಮತ್ತಿತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.ಕಾರ್ಯ ದರ್ಶಿ ಆರ್.ಸಿ. ಪಾಟೀಲ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.