ಖಾದಿ, ಇಕತ್ ವಸ್ತ್ರಗಳ ಮಾರಾಟ

ಭಾನುವಾರ, ಜೂಲೈ 21, 2019
26 °C

ಖಾದಿ, ಇಕತ್ ವಸ್ತ್ರಗಳ ಮಾರಾಟ

Published:
Updated:

ರಾಜ್ಯ ಮತ್ತು ಹೊರರಾಜ್ಯದಲ್ಲಿ ಕೈಯಲ್ಲಿ ನೇಯ್ದ ಖಾದಿ ಮಗ್ಗಗಳ ಫ್ಯಾಬ್ರಿಕ್‌ನಿಂದ ಸೀರೆ, ಕುರ್ತಾ, ಕೈಚೀಲ, ಪುರುಷರ ಅಂಗಿ ಇತ್ಯಾದಿಗಳನ್ನು ವಿನ್ಯಾಸಗೊಳಿಸುವ `ಮೆಟಫರ್ ರಚ' ಗೆಳೆಯರ ಸಂಗ್ರಹ ಮತ್ತು ಕೈಯಿಂದ ಸಿದ್ಧಪಡಿಸಿದ ಇಕತ್ ವಿನ್ಯಾಸದ ವಸ್ತ್ರಗಳ ಸಂಗ್ರಹ `ಟ್ರಾನ್ಸ್‌ಲೇಟ್'ನ ಪ್ರದರ್ಶನ, ಮಾರಾಟ ಜುಲೈ 16ಕ್ಕೆ ಕೊನೆಗೊಳ್ಳಲಿದೆ.ಬಸವನಗುಡಿ ಎಂ.ಎನ್. ಕೃಷ್ಣರಾವ್ ಪಾರ್ಕ್ ಮುಂಭಾಗದಲ್ಲಿರುವ ಬಸವ ಅಂಬರದಲ್ಲಿ ನಡೆದಿರುವ ಈ ಪ್ರದರ್ಶನ, ಮಾರಾಟದಲ್ಲಿ ರವಿಕಿರಣ್ ಮತ್ತು ಚಂದ್ರಶೇಖರ್ ಅವರು ತಮ್ಮ `ಮೆಟಫರ್ ರಚ' ಸಂಗ್ರಹದಲ್ಲಿ ಚೌಕಳಿ, ಗೀಟು ವಿನ್ಯಾಸ ಹಾಗೂ ವಿವಿಧ ವರ್ಣಗಳಲ್ಲಿ ಫ್ಯಾಬ್ರಿಕ್ ಹಾಗೂ ಉಡುಪುಗಳು ಲಭ್ಯ.ವಿನಿತಾ ಪಾಸರಿ ಅವರು `ಟ್ರಾನ್ಸ್‌ಲೇಟ್' ಹೆಸರಿನಲ್ಲಿ ಪ್ರಸ್ತುತಪಡಿಸಿರುವ ಈ ಸೀರೆಗಳು ಇಕತ್ ವಿನ್ಯಾಸದಲ್ಲಿ ಸಮೃದ್ಧವಾಗಿವೆ. ಹೈದರಾಬಾದ್‌ನಲ್ಲಿ ಬ್ರಾಂಡ್ ಆಗಿ ಹೆಸರಾಗಿರುವ `ಟ್ರಾನ್ಸ್‌ಲೇಟ್'ನಲ್ಲಿ ಇಕತ್ ಸೀರೆಗಳು ಹಾಗೂ ಮಹಿಳೆಯರ ಉಡುಪುಗಳಿವೆ.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 2656 1940/6546 1856

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry