ಶುಕ್ರವಾರ, ನವೆಂಬರ್ 22, 2019
26 °C

ಖಾದ್ಯತೈಲ ಆಮದು ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ದೇಶದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಖಾದ್ಯ ತೈಲ ಆಮದು ಶೇ 23ರಷ್ಟು (8.96 ಲಕ್ಷ ಟನ್) ಹೆಚ್ಚಳವಾಗಿದೆ.`ಖಾದ್ಯತೈಲ ಆಮದು ಪ್ರಮಾಣ 2012ರ ಮಾರ್ಚ್‌ನಲ್ಲಿ 7,27,706 ಟನ್ ಇದ್ದರೆ ಈ ವರ್ಷದ ಮಾರ್ಚ್‌ನಲ್ಲಿ 8,96,714 ಟನ್‌ಗೆ ಹೆಚ್ಚಿದೆ' ಎಂದು `ಸಾಲ್ವೆಂಟ್ ಎರ್ಕ್ಸಾಕ್ಟರ್ಸ್‌ ಅಸೋಸಿಯೇಷನ್' ಶುಕ್ರವಾರ ತಿಳಿಸಿದೆ.2012ರ ನವೆಂಬರ್‌ನಿಂದ 2013ರ ಮಾರ್ಚ್‌ವರೆಗಿನ ಅವಧಿಯಲ್ಲಿ ಖಾದ್ಯತೈಲ ಆಮದು ಶೇ 22ರಷ್ಟು(46,31,977 ಟನ್) ಹೆಚ್ಚಳವಾಗಿದೆ.ಒಟ್ಟು ಆಮದಿನಲ್ಲಿ ಶುದ್ಧೀಕರಿಸಿದ ತೈಲ ಪ್ರಮಾಣ ಶೇ 14ರಷ್ಟಿದ್ದರೆ ಕಚ್ಚಾತೈಲ ಪ್ರಮಾಣ ಶೇ 86ರಷ್ಟು ಇದೆ ಎಂದು ವಿವರಿಸಿದೆ.

2012-13ರ ಅವಧಿಯ ಮೊದಲ 5 ತಿಂಗಳಲ್ಲಿ ತಾಳೆ ಎಣ್ಣೆ 38,12,097 ಟನ್ ಆಮದಾಗಿದ್ದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ 29,46,736 ಟನ್ ಆಮದಾಗಿದ್ದಿತು.ಏಪ್ರಿಲ್ 1ರ ವೇಳೆಗೆ ವಿವಿಧ ಬಂದರುಗಳಲ್ಲಿ 8.5 ಲಕ್ಷ ಟನ್ ಸೇರಿದಂತೆ 21 ಲಕ್ಷ ಟನ್ ಖಾದ್ಯತೈಲ ದಾಸ್ತಾನಿದೆ. 4 ತಿಂಗಳ ಅವಧಿಯಲ್ಲಿ ಅತ್ಯಧಿಕ ಪ್ರಮಾಣದ ಖಾದ್ಯತೈಲ ಆಮದು ಮಾಡಿಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)