ಖಾನಾಪುರದಲ್ಲಿ ಮೀಸಲು ಪಡೆಗೆ 400 ಎಕರೆ ಜಮೀನು

ಶನಿವಾರ, ಮೇ 25, 2019
32 °C

ಖಾನಾಪುರದಲ್ಲಿ ಮೀಸಲು ಪಡೆಗೆ 400 ಎಕರೆ ಜಮೀನು

Published:
Updated:

ಬೆಂಗಳೂರು: ಅಕ್ರಮ ವಲಸೆ ತಡೆ ಮತ್ತು ಭಯೋತ್ಪಾದನಾ ನಿಗ್ರಹ ತರಬೇತಿ ಶಾಲೆ ಆರಂಭಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಸುಮಾರು 400 ಎಕರೆ ಜಮೀನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.ಈ ಕುರಿತು ಗುರುವಾರ ನಡೆಯುವ ಸಂಪುಟ ಸಭೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ಈ ಜಮೀನನ್ನು ಉಚಿತವಾಗಿ ನೀಡುವ ಸಾಧ್ಯತೆ ಇದೆ.ಪಿಯುಸಿ ಉಪನ್ಯಾಸಕರನ್ನು ನೇರ ನೇಮಕಾತಿ ಮಾಡಿಕೊಳ್ಳುವ ಬಗ್ಗೆಯೂ ನಿರ್ಧರಿಸುವ ಸಾಧ್ಯತೆ ಇದೆ. ಕೆಪಿಎಸ್‌ಸಿ ಬದಲಿಗೆ ವಿಶೇಷ ನಿಯಮಗಳನ್ನು ರೂಪಿಸಿ ನೇರ ನೇಮಕಾತಿ ಮಾಡಿಕೊಳ್ಳಲು ಯೋಜನೆ ರೂಪಿಸಿದೆ.ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ ಯಂತ್ರೋಪಕರಣ ಖರೀದಿಗಾಗಿ ನಿಗದಿಪಡಿಸುವ ಗರಿಷ್ಠ ಸಹಾಯಧನ ಮಿತಿಯನ್ನು ಸಡಿಲಿಸುವ ಬಗ್ಗೆಯೂ ನಿರ್ಧರಿಸುವ ಸಾಧ್ಯತೆ ಇದೆ. ಭೂಕಬಳಿಕೆ ನಿಷೇದ ಮಸೂದೆ ಸಂಪುಟದ ಮುಂದೆ ಚರ್ಚೆಗೆ ಬರಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry