ಖಾಲಿ ಹುದ್ದೆ ಭರ್ತಿಗೆ ಏಕಾಂಗಿ ಧರಣಿ

7

ಖಾಲಿ ಹುದ್ದೆ ಭರ್ತಿಗೆ ಏಕಾಂಗಿ ಧರಣಿ

Published:
Updated:

ಗದಗ: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಬಳ್ಳಾರಿ ಜಿಲ್ಲೆಯ ಸನಾಥ ಬಂಧು ಸಂಘಟನೆಯ ಮುಖ್ಯಸ್ಥ ಜೆ.ಉದಯ ಅಗಸನೂರು ನಗರದ ಜಿಲ್ಲಾಧಿಕಾರಿ ಕಚೇರಿ ಗುರುವಾರ ಎದುರು ಏಕಾಂಗಿಯಾಗಿ ಧರಣಿ ನಡೆಸಿದರು.ರಾಜ್ಯದಲ್ಲಿ 25 ಸಾವಿರ ಶಿಕ್ಷಕರು ಹಾಗೂ  ಕಾರ್ಯಾಂಗದಲ್ಲಿ 2.14 ಲಕ್ಷಕ್ಕೂ ಹೆಚ್ಚು ನೌಕರರ ಕೊರತೆ ಇದೆ. 1994ರಿಂದ ಸರ್ಕಾರ ಖಾಲಿ ಯಾಗು ತ್ತಿರುವ ಹುದ್ದೆಗಳನ್ನು ಭರ್ತಿ ಮಾಡದೇ ನಿರ್ಲಕ್ಷ್ಯ ಮಾಡುತ್ತಾ ಬಂದಿದೆ. ಹುದ್ದೆಗಳ ಭರ್ತಿಗಾಗಿ ಹಲವು ಬಾರಿ ಧರಣಿ, ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನಾಗಿಲ್ಲ ಎಂದು ಆರೋಪಿಸಿದರು.ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಒಂದು ದಿನ ಧರಣಿ ನಡೆಸಲಾಗುವುದು. ಜ.31ರಂದು ಬೆಂಗಳೂರಿನಲ್ಲಿ ಮುಕ್ತಾಯಗೊಳಿಸಲಾವುದು ಎಂದು ಉದಯ ತಿಳಿಸಿದರು. ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry