ಖಾಸಗಿತನಕ್ಕೆ ಬೇಹುಗಾರಿಕೆ ಅಡ್ಡಿ

7

ಖಾಸಗಿತನಕ್ಕೆ ಬೇಹುಗಾರಿಕೆ ಅಡ್ಡಿ

Published:
Updated:
ಖಾಸಗಿತನಕ್ಕೆ ಬೇಹುಗಾರಿಕೆ ಅಡ್ಡಿ

ಲಂಡನ್ (ಐಎಎನ್‌ಎಸ್): ಅಮೆರಿಕದ ಎರಡು ತಂತ್ರಜ್ಞಾನ ದೈತ್ಯ ಸಂಸ್ಥೆಗಳ  `ವೈಮಾನಿಕ ಬೇಹುಗಾರಿಕೆ~ ರಂಗದಲ್ಲಿನ ಪೈಪೋಟಿಯಿಂದ ವಿಶ್ವದಾದ್ಯಂತ ವ್ಯಕ್ತಿಗಳ ಖಾಸಗಿ ಬದುಕಿಗೆ ಧಕ್ಕೆಯಾಗುವ ಅಪಾಯ ಎದುರಾಗಿದೆ.



ನೆಲದ ಮೇಲಿನ ಪ್ರತಿಯೊಂದು ಚಲನ ವಲನಗಳನ್ನು ಆಕಾಶದಿಂದಲೇ ಹದ್ದಿನ ಕಣ್ಣಿನಿಂದ ನಿಗಾ ಇಡುವ ಈ ಬೇಹುಗಾರಿಕೆ ತಂತ್ರಜ್ಞಾನದಿಂದ, ಬಯಲಿನಲ್ಲಷ್ಟೇ ಅಲ್ಲದೇ ಮನೆಯೊಳಗಿನ ದೃಶ್ಯಗಳನ್ನೂ ಸುಸ್ಪಷ್ಟವಾಗಿ ಸೆರೆಹಿಡಿಯಲು ಸಾಧ್ಯ.



ಸಮಗ್ರ ವೈಮಾನಿಕ ನಕ್ಷೆ ತಯಾರಿಸಲು ಪೈಪೋಟಿಗೆ ಇಳಿದಿರುವ ಗೂಗಲ್ ಅತ್ಯಾಧುನಿಕ ಕ್ಯಾಮೆರಾ ಅಳವಡಿಸಿರುವ ವಿಮಾನಗಳನ್ನು ಪ್ರಪಂಚದ ಬಹುತೇಕ ಕಡೆ ಹಾರಿಬಿಟ್ಟಿದೆ. ಈ ಗೂಢಚಾರ ವಿಮಾನಗಳ ಕ್ಯಾಮೆರಾ ಕಣ್ಣು ಎಲ್ಲರ ಮನೆಯ ಕೋಣೆಯೊಳಗೂ ಇಣುಕಬಲ್ಲದು!



ಆ್ಯಪಲ್ ಸಂಸ್ಥೆಯು, ತಾನು ಸ್ವಾಧೀನಪಡಿಸಿಕೊಂಡಿರುವ `ಆಕಾಶದಲ್ಲಿ ಬೇಹುಗಾರಿಕೆ~ ತಂತ್ರಜ್ಞಾನ ಬಳಸುವ ಸಂಸ್ಥೆಯ ನೆರವಿನಿಂದ ಲಂಡನ್ ಸೇರಿದಂತೆ 20 ನಗರಗಳ ವೈಮಾನಿಕ ದೃಶ್ಯಗಳನ್ನು ಸೆರೆ ಹಿಡಿದಿದೆ.



ಆ್ಯಪಲ್ ಕ್ಯಾಮೆರಾಗಳ ತಂತ್ರಜ್ಞಾನ ಎಷ್ಟು ಅತ್ಯಾಧುನಿಕವಾಗಿದೆ ಎಂದರೆ, ಅವು ಮನೆಯ ಕಿಟಕಿಯ ಒಳಗಿನಿಂದ ಮಂದ ಬೆಳಕಿನಲ್ಲೂ ಸ್ಪಷ್ಟ ಮತ್ತು ನಿಖರವಾದ ಚಿತ್ರಗಳನ್ನು ಸೆರೆ ಹಿಡಿಯಬಲ್ಲವು. ಆಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ಅಡಗುದಾಣವನ್ನು ಪತ್ತೆ ಹಚ್ಚಲು ಅಮೆರಿಕದ ಬೇಹುಗಾರಿಕೆ ಸಂಸ್ಥೆಗಳು ಬಳಸಿದ್ದ ಅತ್ಯಾಧುನಿಕ ತಂತ್ರಜ್ಞಾನವನ್ನೇ ಆ್ಯಪಲ್ ಬಳಸುತ್ತಿದೆ.



ಗೂಗಲ್ ಬೇಹುಗಾರಿಕಾ ವಿಮಾನಗಳು ಸೆರೆ ಹಿಡಿಯಲಿರುವ `3ಡಿ~ ಚಿತ್ರಗಳು ಉಪಗ್ರಹ ಸೆರೆ ಹಿಡಿಯುವ ಭೂಮಿಯ ಚಿತ್ರಗಳಿಗಿಂತ ಹೆಚ್ಚು ಸ್ಪಷ್ಟ ಮತ್ತು ನಿಖರವಾಗಿರುತ್ತವೆ. 



ಎರಡು ದೈತ್ಯ ಕಂಪೆನಿಗಳ ಈ ವ್ಯಾವಹಾರಿಕ ಪೈಪೋಟಿಯು ದೇಶವೊಂದರ ಸುರಕ್ಷತೆ ಮತ್ತು ವ್ಯಕ್ತಿಗಳ ಖಾಸಗಿ ಜೀವನಕ್ಕೂ ಮಾರಕವಾಗಿ ಪರಿಣಮಿಸಲಿದೆ  ಎಂದು `ಬಿಗ್ ಬ್ರದರ್ ವಾಚ್~ ಕಂಪೆನಿಯ ನಿರ್ದೇಶಕ ನಿಕ್ ಪಿಕಲ್ಸ್ ಎಚ್ಚರಿಕೆ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry