ಬುಧವಾರ, ಆಗಸ್ಟ್ 12, 2020
27 °C

ಖಾಸಗಿ ಬಸ್ ನಿಲ್ದಾಣ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಸಾರ್ವಜನಿಕ ಉದ್ದೇಶಗಳಿಗಾಗಿ ದುಡಿಯುವ ಸಂಘ ಸಂಸ್ಥೆಗಳಿಗೆ ನಿವೇಶನ ನೀಡುವ ಸಲುವಾಗಿ ಅತಿಕ್ರಮಣ ತೆರವುಗೊಳಿಸಲಾಗುತ್ತಿದೆಯೇ ಹೊರತು ನಮ್ಮ ಸ್ವಂತಕ್ಕಲ್ಲ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ಹೇಳಿದರು.ನಗರದ ಪ್ರಭಾಕರ್ ಬಡಾವಣೆಯಲ್ಲಿ ಗಾಯನ ಸಮಾಜ ಸೋಮವಾರ ಹಮ್ಮಿಕೊಂಡಿದ್ದ ವಾಗ್ಗೇಯಕಾರರ ಆರಾಧನಾ ಮಹೋತ್ಸವದಲ್ಲಿ ವಿದ್ವಾಂಸರನ್ನು ಸನ್ಮಾನಿಸಿ ಮಾತನಾಡಿದರು.ನಗರದಲ್ಲಿ ರೈತರ ಸಂತೆ, ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಅತಿಕ್ರಮಣಕ್ಕೆ ಒಳಗಾದ ಸರ್ಕಾರಿ ಜಾಗವನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗಿಲ್ಲ. ನಗರದ ಖಾಸಗಿ ಬಸ್ ನಿಲ್ದಾಣವನ್ನು ರಾಮಕುಂಟೆ ಪ್ರದೇಶಕ್ಕೆ ಸ್ಥಳಾಂತರಿಸುವ  ಪ್ರಸ್ತಾವನೆ ಬಹುತೇಕ ಅಂತಿಮ ಹಂತದಲ್ಲಿದೆ ಎಂದರು.

"

ಸಾರ್ವಜನಿಕರಿಗೆ ಅಗತ್ಯವಾದ ಕಾರ್ಯಗಳಿಗೆ ಜಮೀನು ನೀಡಲು ಸ್ಥಳವಿಲ್ಲ, ಸರ್ಕಾರಿ ಕಡತಗಳಲ್ಲಿ ಸರ್ಕಾರದ ಜಮೀನಿದೆ. ಸ್ಥಳಕ್ಕೆ ಹೋಗಿ ನೋಡಿದರೆ ಅತಿಕ್ರಮಣವಾಗಿರುತ್ತದೆ. ಸರ್ಕಾರಿ ಜಮೀನುಗಳ ಸರ್ವೆ ಮಾಡಿಸಲು ಕಳೆದ ನಾಲ್ಕು ವರ್ಷಗಳಿಂದ ಸತತ ಪ್ರಯತ್ನ ನಡೆಸುತ್ತಿದ್ದರೂ ಪೂರ್ಣ ಯಶಸ್ಸು ದೊರೆತಿಲ್ಲ, ಅಧಿಕಾರಿಗಳ ಅಸಹಕಾರ, ರಾಜಕೀಯ ನಾಯಕರ ಒತ್ತಡಗಳು ಇದಕ್ಕೆ ಕಾರಣ ಎಂದು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲ್ಲೂಕಿನ ಚೆನ್ನಕೇಶವಪುರ, ಬಿಂಗಾನಹಳ್ಳಿ ಗ್ರಾಮಗಳಲ್ಲಿ ತಲಾ ರೂ. 10 ಲಕ್ಷ ವೆಚ್ಚದಲ್ಲಿ ಕಲಾಭವನ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಗಾಯನ ಸಮಾಜಕ್ಕೂ ಸಹಾಯ ಮಾಡುವುದಾಗಿ ಭರವಸೆ ನೀಡಿದರು.ಡಿವೈಎಸ್‌ಪಿ ಆನಂದ್ ಮಾತನಾಡಿ, ಸಂಸ್ಕಾರವಿದ್ದು ಶ್ರದ್ಧೆ. ಭಕ್ತಿ ಮತ್ತು ಸತತ ಅಭ್ಯಾಸದಿಂದ ಮಾತ್ರ ಸಂಗೀತ ಒಲಿಯುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವಂತಹ ಸಂಗೀತ ಕಾರ್ಯಕ್ರಮಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ ಎಂದು ವಿಷಾದಿಸಿದರು.ತಂಬೂರ ಶೃತಿಗಾಗಿ ಹುಳಿಕಲ್ ಪ್ರಸಾದ್, ಹಿಂದೂಸ್ತಾನಿ ಸಂಗೀತದ ಮಹಾಲಿಂಗಯ್ಯ, ಪಿಟೀಲು            ವಾದಕ ಜಿ.ಎನ್.ಶ್ಯಾಮಸುಂದರ್, ಮೃದಂಗದ ಕೆ.ವಿ.ಶಿವಲಿಂಗಯ್ಯ, ಸಮಾಜ ಸೇವೆಗಾಗಿ ಎನ್.ಎಸ್.ಪ್ರಭಾಕರ್, ತಬಲ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಿ.ಎಸ್.ವೆಂಕಟಾಚಲಪತಿ ಮಾತನಾಡಿದರು. ವಿದ್ವಾನ್ ಪುದುಕ್ಕೋಟೈ ರಾಮನಾಥನ್ ಅಧ್ಯಕ್ಷತೆ ವಹಿಸಿದ್ದರು. ಗಾಯನ ಸಮಾಜದ ಅಧ್ಯಕ್ಷ ಪುರುಷೋತ್ತಮರಾವ್ ಉಪಸ್ಥಿತರಿದ್ದರು. ಗಾಯನ ಸಮಾಜದ  ಕಾರ್ಯದರ್ಶಿ ಎಲ್.ವೈ.ಶ್ರೀನಿವಾಸರೆಡ್ಡಿ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.