ಶುಕ್ರವಾರ, ಮೇ 14, 2021
31 °C

ಖಾಸಗಿ ಭವಿಷ್ಯ ನಿಧಿ ಟ್ರಸ್ಟ್: ತೆರಿಗೆ ವಿನಾಯ್ತಿ ವಿಸ್ತರಣೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದ ಸುಮಾರು 2,700 ಖಾಸಗಿ ಭವಿಷ್ಯನಿಧಿ ಟ್ರಸ್ಟ್‌ಗಳಲ್ಲಿ (ಪಿಪಿಎಫ್‌ಟಿ)  ಕೇವಲ 284 ಟ್ರಸ್ಟ್‌ಗಳು ಮಾತ್ರ ಪ್ರಸಕ್ತ ವರ್ಷ ಕಾರ್ಮಿಕ ಸಚಿವಾಲಯದಿಂದ ಆದಾಯ ತೆರಿಗೆ ವಿನಾಯ್ತಿ ಪತ್ರ ಪಡೆದುಕೊಂಡಿವೆ.   ಹಲವಾರು ಟ್ರಸ್ಟ್‌ಗಳು ತೆರಿಗೆ ವಿನಾಯ್ತಿ ಪತ್ರ ಪಡೆಯದ ಹಿನ್ನೆಲೆಯಲ್ಲಿ ಸುಮಾರು 46 ಲಕ್ಷದಷ್ಟು  ಕಾರ್ಮಿಕರು `ಆದಾಯ ತೆರಿಗೆ ಮನ್ನಾ~ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, 2006ರಲ್ಲಿ ಎಲ್ಲ ಖಾಸಗಿ ಭವಿಷ್ಯ ನಿಧಿ ಟ್ರಸ್ಟ್‌ಗಳು ಕಾರ್ಮಿಕ ಸಚಿವಾಲಯದಿಂದ ಪ್ರತಿ ವರ್ಷ ಆದಾಯ ತೆರಿಗೆ ವಿನಾಯ್ತಿ ಪತ್ರ ಪಡೆಯಬೇಕೆಂದು ಕಡ್ಡಾಯಗೊಳಿಸಿದ್ದರು. ಇಂತಹ ವಿನಾಯ್ತಿ ಪ್ರಮಾಣಪತ್ರ ಪಡೆಯದ ಸಂಸ್ಥೆಗಳಿಗೆ ಕಾರ್ಮಿಕ ಸಚಿವಾಲಯದ ಕೋರಿಕೆ ಮೇರೆಗೆ ತೆರಿಗೆ ಮನ್ನಾ ಸೌಲಭ್ಯವನ್ನು ಬಜೆಟ್‌ನಲ್ಲಿ ವಿಸ್ತರಿಸುತ್ತ ಬರಲಾಗಿತ್ತು.ಈ ಬಾರಿ ಕಾರ್ಮಿಕ ಇಲಾಖೆಯು ಬಜೆಟ್‌ಗೆ ಮುನ್ನ ಇಂತಹ ಮನವಿ ಸಲ್ಲಿಸಿಲ್ಲ.  ಹೀಗಾಗಿ 2012-13ನೇ ಸಾಲಿನ ಬಜೆಟ್‌ನ್ಲ್ಲಲಿ  ತೆರಿಗೆ ಮನ್ನಾ ಪ್ರಸ್ತಾವ ಇಲ್ಲ. ಒಂದು ವೇಳೆ ತೆರಿಗೆ ವಿನಾಯ್ತಿ ಲಭಿಸದಿದ್ದರೆ ಅದು  ಉದ್ಯೋಗಿಗಳ ಮೇಲೂ, ಉದ್ಯೋಗದಾತರ ಮೇಲೂ ಪರಿಣಾಮ ಬೀರಲಿದೆ.ಲಕ್ಷಾಂತರ ಜನ ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಹಣಕಾಸು ಸಚಿವಾಲಯ, `ಪಿಪಿಎಫ್‌ಟಿ~ಗಳಿಗೆ ತೆರಿಗೆ ವಿನಾಯ್ತಿ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.`ಪಿಪಿಎಫ್‌ಟಿ~ಗಳಿಗೆ ತೆರಿಗೆ ವಿನಾಯ್ತಿ ವಿಸ್ತರಿಸುವಂತೆ ಕಾರ್ಮಿಕ ಸಚಿವಾಲಯ ಶೀಘ್ರದಲ್ಲೇ ಹಣಕಾಸು ಸಚಿವಾಲಯಕ್ಕೆ ಮನವಿ ಸಲ್ಲಿಸಲಿದೆ.ಆದಾಗ್ಯೂ,  ಆದಾಯ ತೆರಿಗೆ ವಿನಾಯ್ತಿ ಲಭಿಸದಿದ್ದರೆ, ಅದು ಲಕ್ಷಾಂತರ ಜನ ಕಾರ್ಮಿಕರ ಪಿಂಚಣಿ ಮೊತ್ತದ ಮೇಲೆ ಪರಿಣಾಮ ಬೀರಲಿದೆ. ವಿನಾಯ್ತಿ ಪ್ರಮಾಣಪತ್ರ ಪಡೆಯದ ಖಾಸಗಿ ಭವಿಷ್ಯ ನಿಧಿ ಟ್ರಸ್ಟ್‌ಗಳು ಕಾರ್ಮಿಕರ ಹಣವನ್ನು ಇತರ ಹೂಡಿಕೆಗಳಲ್ಲಿ ತೊಡಗಿಸಿದ್ದರೆ ಅದರಿಂದ ಬರುವ ವರಮಾನ ಮತ್ತು `ಪಿಎಫ್~ನ ವಾರ್ಷಿಕ ಸಂಗ್ರಹದ ಮೇಲಿನ ವರಮಾನಕ್ಕೂ  ತೆರಿಗೆ ಕಟ್ಟಬೇಕಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.