ಸೋಮವಾರ, ಅಕ್ಟೋಬರ್ 21, 2019
24 °C

ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಗಡುವು

Published:
Updated:

ನವದೆಹಲಿ (ಪಿಟಿಐ): ಸುರಕ್ಷಾ ಕ್ರಮಗಳ ನಿರ್ಲಕ್ಷ್ಯ ಮತ್ತು ಅಸಮರ್ಪಕ ಲೆಕ್ಕಪತ್ರ ನಿರ್ವಹಣೆಗಾಗಿ ಕಿಂಗ್‌ಫಿಶರ್ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿರುದ್ಧ ಹರಿಹಾಯ್ದಿದ್ದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇತರ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಇದೇ ವಿಷಯವಾಗಿ ಛೀಮಾರಿ ಹಾಕಿದೆ.

ಇಂಡಿಗೊ, ಸ್ಪೈಸ್ ಜೆಟ್, ಜೆಟ್ ಏರ್‌ವೇಸ್ ಮುಂತಾದ ಸಂಸ್ಥೆಗಳಿಗೆ  ಲೆಕ್ಕಪರಿಶೋಧನಾ ವರದಿ ಸಲ್ಲಿಸುವಂತೆ ಸೂಚಿಸಿದೆ.

Post Comments (+)