ಖಾಸಗಿ ವಿವಿ ಅವಶ್ಯಕತೆ ಇದೆಯೇ?

7

ಖಾಸಗಿ ವಿವಿ ಅವಶ್ಯಕತೆ ಇದೆಯೇ?

Published:
Updated:

ರಾಜ್ಯ ಸರ್ಕಾರ ಖಾಸಗಿ ವಿವಿಗಳಿಗೆ  ಒಪ್ಪಿಗೆ ನೀಡುತ್ತಿರುವುದು ಖಂಡನೀಯ. ಉತ್ತರ ಕರ್ನಾಟಕದಲ್ಲಿ ವಿವಿಗಳಿಗೇನು ಬರವಿಲ್ಲ.ಇಲ್ಲಿ ಈಗಾಗಲೇ ಐದು ವಿಶ್ವವಿದ್ಯಾಲಯಗಳಿವೆ. ಈ ಭಾಗದಲ್ಲಿ ಕರ್ನಾಟಕ ಕೇಂದ್ರೀಯ ವಿವಿ ಕೂಡ ಇದೆ. ಇನ್ನು ಖಾಸಗಿ ವಿವಿಯ ಅವಶ್ಯಕತೆ ಏನಿದೆ? ಸರಕಾರ ಈ ನಿಟ್ಟಿನಲ್ಲಿ ಚಿಂತನೆ ಮಾಡಲಿ. ದೇಶದಲ್ಲಿ ಎಲ್ಲ ಕ್ಷೇತ್ರಗಳು ಖಾಸಗೀಕರಣವಾಗುತ್ತಲಿವೆ.

 

ಶಿಕ್ಷಣ, ಉದ್ಯೋಗ, ಟಿ.ವಿ ಮಾಧ್ಯಮ, ಆಸ್ಪತ್ರೆ ಎಲ್ಲ ಸಾರ್ವಜನಿಕ ಕ್ಷೇತ್ರಗಳು ಖಾಸಗೀಕರಣಕ್ಕೆ ಒಳಪಡುತ್ತಲಿದೆ. ಇವು ಜನಸಾಮಾನ್ಯರಿಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತವೆ? ಕೇವಲ ಒಂದು ಖಾಸಗಿ ವಿಶ್ವವಿದ್ಯಾಲಯದಲ್ಲಿ ಒಬ್ಬ ಬಡ ವಿದ್ಯಾರ್ಥಿ ಓದಲು ಸಾಧ್ಯವೇ. ಎಂಬ ಪ್ರಶ್ನೆ ಸರ್ಕಾರಕ್ಕೆ ಏಕೆ ಅರಿವಾಗುತ್ತಿಲ್ಲ? ಖಾಸಗಿ ವಿಶ್ವವಿದ್ಯಾಲಯ  ಬಂಡವಾಳಶಾಹಿಗಳ ಕೈಯ್ಯಲ್ಲಿರುತ್ತದೆ ಅಷ್ಟೇ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry