ಖಾಸಗಿ ವೈದ್ಯಕೀಯ ಸಂಸ್ಥೆ ನೋಂದಣಿೆ ಕಡ್ಡಾಯ

7

ಖಾಸಗಿ ವೈದ್ಯಕೀಯ ಸಂಸ್ಥೆ ನೋಂದಣಿೆ ಕಡ್ಡಾಯ

Published:
Updated:

ಮಂಗಳೂರು: ಕಾನೂನಿನ್ವಯ ನೋಂದಾಯಿಸಲ್ಪಡದ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ  ಸುಬೋಧ್ ಯಾದವ್ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ ಸರ್ಕಾರದ ಕಾನೂನನ್ನು ಅನುಷ್ಠಾನಕ್ಕೆ ತರಲು ಕ್ರಮಕೈಗೊಳ್ಳುವಂತೆ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಒ. ಆರ್. ರಂಗಪ್ಪ ಅವರಿಗೆ ಸೂಚನೆ ನೀಡಿದರು. ಕರ್ನಾಟಕ ಖಾಸಗಿ ವೈದ್ಯಕೀಯ ನೋಂದಣಿ ಅಧಿನಿಯಮ 2007 ಮತ್ತು ಕಾನೂನು 2009ರ ಅನ್ವಯ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನೋಂದಾಯಿಸಲು ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿದ್ದು, ಇನ್ನೂ ಈ ಸಂಬಂಧ ಅರ್ಜಿ ಸ್ವೀಕರಿಸದ ಸಂಸ್ಥೆಗಳು ಇದುವರೆಗೆ ನೋಂದಾಯಿಸದಿರುವ ಬಗ್ಗೆ ಡಿ.ಸಿ. ಅಸಮಾದಾನ ವ್ಯಕ್ತಪಡಿಸಿದರು.ಪ್ರಸಕ್ತ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ದಾಖಲಿಸಲು ಈಗಿರುವ ತಾಲ್ಲೂಕು ವೈದ್ಯಾಧಿಕಾರಿಗಳ ನೇತೃತ್ವದಲ್ಲಿರುವ ತಂಡಗಳ ಜತೆಗೆ ಇನ್ನೂ 4 ಹೆಚ್ಚುವರಿ ತಂಡಗಳನ್ನು ರಚಿಸಲು ಜಿಲ್ಲಾಧಿಕಾರಿ ಸೂಚಿಸಿದರು.ಮಂಗಳೂರು ತಾಲ್ಲೂಕಿನಲ್ಲಿ ಹೆಚ್ಚಿನ ಖಾಸಗಿ ಸಂಸ್ಥೆಗಳಿದ್ದು, ಸಂಸ್ಥೆಗಳು ಸ್ವಚ್ಛ ಪರಿಸರ, ಮೂಲ ಸೌಕರ್ಯ ಸೇರಿದಂತೆ ರೋಗಿಗಳ ಸಮಗ್ರ ತಪಾಸಣಾ ದಾಖಲೆ, ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆ, ನೋಂದಣಿ ಸೇರಿದಂತೆ ಸಮಗ್ರ ಮಾಹಿತಿಯನ್ನು ಸಂಸ್ಥೆಯ ಹೊರಗೆ ಪ್ರದರ್ಶಿಸಬೇಕೆಂಬ ಷರತ್ತುಗಳಿವೆ. ಈ ಷರತ್ತುಗಳನ್ನು ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಪ್ರಥಮ ಚಿಕಿತ್ಸೆ, ವೈದ್ಯಕೀಯ ಕಾನೂನು ದೂರುಗಳು, ಸಾಂಕ್ರಾಮಿಕ ರೋಗಿಗಳನ್ನು ಕಡ್ಡಾಯವಾಗಿ ಪರೀಕ್ಷಿಸಿ, ಡಿಎಚ್‌ಒ ಅವರಿಗೆ ವರದಿ ಸಲ್ಲಿಸಬೇಕು. ತಪಾಸಣೆಗೊಳಗಾದ ಸಂಸ್ಥೆಗಳನ್ನು ತಂಡ ಶೀಘ್ರದಲ್ಲೇ ತೆರಳಿ ತಪಾಸಣೆ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಒ. ಆರ್. ರಂಗಪ್ಪ,  ಮಂಗಳೂರು ತಾಲ್ಲೂಕಿನಲ್ಲಿ 995 ಅರ್ಜಿಗಳನ್ನು ವಿತರಿಸಲಾಗಿದ್ದು, 929 ಅರ್ಜಿಗಳು ಸ್ವೀಕೃತವಾಗಿವೆ. ಈವರೆಗೆ 103 ಸಂಸ್ಥೆಗಳನ್ನು ತಪಾಸಣೆ ನಡೆಸಿ ಇವುಗಳಲ್ಲಿ 32 ಅರ್ಹ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.ಬಂಟ್ವಾಳದಲ್ಲಿ 165 ಅರ್ಜಿ ವಿತರಿಸಲಾಗಿದ್ದು, ಈವರೆಗೆ 165 ಸ್ವೀಕೃತವಾಗಿದ್ದು, 145 ತಪಾಸಣೆಯಾಗಿದೆ. 101 ನೋಂದಣಿಗೆ ಅರ್ಹ ಎಂದು ಗುರುತಿಸಲಾಗಿದೆ. ಪುತ್ತೂರಿನಲ್ಲಿ 228 ಅರ್ಜಿ ವಿತರಿಸಲಾಗಿದ್ದು, ಈವರೆಗೆ 200 ಸ್ವೀಕೃತವಾಗಿದೆ. 156 ತಪಾಸಣೆಯಾಗಿದ್ದು, 129 ನೋಂದಣಿಗೆ ಅರ್ಹ ಎಂದು ಗುರುತಿಸಲಾಗಿದೆ. ಸುಳ್ಯದಲ್ಲಿ ತಾಲ್ಲೂಕಿನಲ್ಲಿ 96  ಅರ್ಜಿ ವಿತರಿಸಲಾಗಿದ್ದು, 91 ಅರ್ಜಿ ಸ್ವೀಕೃತವಾಗಿವೆ. ಈವರೆಗೆ 33 ಸಂಸ್ಥೆಗಳನ್ನು ತಪಾಸಣೆ ನಡೆಸಿ ಇವುಗಳಲ್ಲಿ 22 ಅರ್ಹ ಎಂದು ಗುರುತಿಸಲಾಗಿದೆ. ಬೆಳ್ತಂಗಡಿಯಲ್ಲಿ 134  ಅರ್ಜಿ ವಿತರಿಸಲಾಗಿದ್ದು, 126 ಅರ್ಜಿಗಳು ಸ್ವೀಕೃತವಾಗಿವೆ. ಈವರೆಗೆ 40 ಸಂಸ್ಥೆಗಳನ್ನು ತಪಾಸಣೆ ನಡೆಸಿ 35 ಅರ್ಹ ಎಂದು ಗುರುತಿಸಲಾಗಿದೆ ಎಂದರು.ಐಎಂಎ ಅಧ್ಯಕ್ಷರು ಎಲ್ಲಾ ತಾಲ್ಲೂಕು ಕೇಂದ್ರದ ವೈದ್ಯಾಧಿಕಾರಿಗಳು ಸಭೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry