ಬುಧವಾರ, ಅಕ್ಟೋಬರ್ 16, 2019
21 °C

ಖಾಸಗಿ ಶಾಲೆಗಳಲ್ಲೂ ಬಿಸಿಯೂಟ

Published:
Updated:

ನವದೆಹಲಿ: ಪರಿಶಿಷ್ಟ ಜಾತಿ/ ಪಂಗಡದವರು ಹೆಚ್ಚಿರುವ ಜಿಲ್ಲೆಗಳ ಖಾಸಗಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರಚಿಸಿರುವ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕಾರಿ ತಂಡವು, ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಸ್ತರಿಸಲು ಶಿಫಾರಸು ಮಾಡಿದೆ ಎಂದು ಸಚಿವಾಲಯದ ಮೂಲ `ಪ್ರಜಾವಾಣಿ~ ಗೆ  ತಿಳಿಸಿವೆ.ತನ್ನ ಶಿಫಾರಸುಗಳನ್ನು `ಹಂತ ಹಂತ~ವಾಗಿ ಅನುಷ್ಠಾನಗೊಳಿಸುವಂತೆ ಸಮಿತಿ ಸಲಹೆ ನೀಡಿದೆ. ಪರಿಶಿಷ್ಟರ ಪ್ರಾಬಲ್ಯದ ಪ್ರದೇಶಗಳ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಯೋಜನೆ ವಿಸ್ತರಿಸಿದರೆ ಮಕ್ಕಳ ಪ್ರವೇಶ ಹಾಗೂ ಹಾಜರಾತಿ ಹೆಚ್ಚುತ್ತದೆ. ಅಲ್ಲದೆ ಮಕ್ಕಳು ಅರ್ಧಕ್ಕೇ ಶಾಲೆ ಬಿಡುವ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಅವರಲ್ಲಿ ಪೌಷ್ಠಿಕತೆ ಪ್ರಮಾಣ ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.ಕಾರ್ಯಕಾರಿ ಸಮಿತಿಯ ಶಿಫಾರಸುಗಳನ್ನು ಸಚಿವಾಲಯವು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಪರಿಶೀಲಿಸುತ್ತಿದೆ.ಈ ಪ್ರಸ್ತಾವಕ್ಕೆ ಸಚಿವಾಲಯವು ತಾತ್ವಿಕ ಒಪ್ಪಿಗೆ ನೀಡಿದೆ. ಯೋಜನೆ ಜಾರಿಯಲ್ಲಿ ಸರ್ಕಾರೇತರ ಸಂಸ್ಥೆಗಳನ್ನು ಬಳಸಿಕೊಳ್ಳುವ ದಿಸೆಯಲ್ಲಿಯೂ ಚಿಂತನೆ ನಡೆಯುತ್ತಿದೆ. 95ರಲ್ಲಿ ಆರಂಭವಾದ ಯೋಜನೆ ವ್ಯಾಪ್ತಿಗೆ ದೇಶದಾದ್ಯಂತ 12.65 ಲಕ್ಷಕ್ಕೂ ಹೆಚ್ಚಿನ ಶಾಲೆಗಳ ಸುಮಾರು 12 ಕೋಟಿ ಮಕ್ಕಳು ಬರುತ್ತಾರೆ.

Post Comments (+)