ಖಾಸಗಿ ಶಾಲೆಗಳ ಬೇಡಿಕೆ ನ್ಯಾಯಯುತ

ಮಂಗಳವಾರ, ಜೂಲೈ 16, 2019
24 °C

ಖಾಸಗಿ ಶಾಲೆಗಳ ಬೇಡಿಕೆ ನ್ಯಾಯಯುತ

Published:
Updated:

ಬೆಂಗಳೂರು: `ಖಾಸಗಿ ಶಾಲೆಗಳು ಕೇಳುತ್ತಿರುವ ಬೇಡಿಕೆಗಳಲ್ಲಿ ಕೆಲವು ನ್ಯಾಯಯುತವಾಗಿವೆ. ಅವುಗಳನ್ನು ಸರ್ಕಾರ ಈಡೇರಿಸಲೇಬೇಕು. ಇಲ್ಲವಾದರೆ, ಪ್ರತಿಷ್ಠಾನದ ವತಿಯಿಂದ ಶಾಲೆಗಳನ್ನು ಬಂದ್ ಮಾಡದೆ, ಸತ್ಯಾಗ್ರಹವನ್ನು ನಡೆಸಲಾಗುವುದು~ ಎಂದು ಕರ್ನಾಟಕ ಸ್ವತಂತ್ರ ಶಾಲೆಗಳ ಆಡಳಿತ ಮಂಡಳಿಯ ಪ್ರತಿಷ್ಠಾನದ ಅಧ್ಯಕ್ಷ ಎಲ್.ಆರ್.ಶಿವರಾಮೇಗೌಡ ಹೇಳಿದರು.ಬುಧವಾರ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು, `ಸರ್ಕಾರವು ಎಲ್ಲ ಸಮಸ್ಯೆಗಳನ್ನು ಮಾತುಕತೆ ನಡೆಸುವ ಮೂಲಕ ಪರಿಹರಿಸಬಹುದಿತ್ತು. ಪರಿಸ್ಥಿತಿಯನ್ನು ವಿಕೋಪಕ್ಕೆ ಹೋಗದಂತೆ ತಡೆಯಬಹುದಿತ್ತು. ಆದರೆ, ಸರ್ಕಾರ ಇದರ ವ್ಯತಿರಿಕ್ತ ಕ್ರಮಗಳನ್ನು ಕೈಗೊಂಡು ಕಾನೂನನ್ನು ಗೊಂದಲಮಯವಾಗಿಸಿದೆ~ ಎಂದರು.`ಸರ್ಕಾರ ಖಾಸಗಿ ಶಾಲೆಗಳಿಗೆ ನೀಡಿರುವ ನೋಟಿಸ್ ಅನ್ನು ವಾಪಸು ಪಡೆಯಬೇಕು. ಸರ್ಕಾರವು ಶಿಕ್ಷಣಕ್ಕೆ ಏಕ ರೀತಿಯ ಕಾನೂನು ಜಾರಿಗೆ ತರಲಿ. ಶಿಕ್ಷಣ ಹಕ್ಕು ಕಾಯ್ದೆಗೆ ಇರುವ ಗೊಂದಲಸರಿಪಡಿಸಬೇಕು~ ಎಂದರು.`ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ (ಕುಸ್ಮಾ)ಪ್ರತಿಭಟನೆಯಿಂದ ಕಷ್ಟಕ್ಕೆ ಸಿಲುಕಿದವರು ಮಕ್ಕಳು ಮತ್ತು ಪೋಷಕರು. ಅವರಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರ ಮತ್ತು ಕುಸ್ಮಾ ದ ನಡುವೆ ಮಧ್ಯೆ ಪ್ರವೇಶಿಸಿ ಸಭೆಯನ್ನು ನಡೆಸಿ ಸಮಾಲೋಚನೆ ನಡೆಸಲಾಗುವುದು~ ಎಂದರು.`ಕಡ್ಡಾಯ ಶಿಕ್ಷಣಕ್ಕೆ ಪ್ರತಿಷ್ಠಾನವು ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಖಾಸಗಿ ಶಾಲೆಗಳ ಅಹವಾಲುಗಳನ್ನು ಸರ್ಕಾರ ಕೇಳಬೇಕು. ಅದಕ್ಕೆ ಪರಿಹಾರಗಳನ್ನು ಸೂಚಿಸಬೇಕು~ ಎಂದು ಹೇಳಿದರು.`ಕುಸ್ಮಾ ಪ್ರತಿಭಟನೆಯನ್ನು ವಾಪಸು ಪಡೆದಿರುವುದರಿಂದ ಸಮಸ್ಯೆ ಪರಿಹಾರವಾಯಿತೆಂದು ಸರ್ಕಾರ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯ ಗೊಂದಲವನ್ನು ಪರಿಹರಿಸಬೇಕು. ನಾವು ಇಟ್ಟಿರುವ ಬೇಡಿಕೆಗಳ ಅವಲೋಕನ ನಡೆಸಬೇಕು~ ಎಂದರು. ಗೋಷ್ಠಿಯಲ್ಲಿ ಕಾರ್ಯಕಾರಿ ಅಧ್ಯಕ್ಷ ಜಿ.ಸಿ.ಚಂದ್ರಶೇಖರ್, ವ್ಯವಸ್ಥಾಪಕ ಕಾರ್ಯದರ್ಶಿ ಮಾನ್ಸೂರ್ ಅಲಿ ಖಾನ್ ಮತ್ತಿತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry