ಖಾಸಗಿ ಶಾಲೆಗೆ ಲಗಾಮು

7
ಸಂದರ್ಶನಕ್ಕೆ ನಿಷೇಧ: ಪ್ರವೇಶಕ್ಕೆ ವೇಳಾಪಟ್ಟಿ

ಖಾಸಗಿ ಶಾಲೆಗೆ ಲಗಾಮು

Published:
Updated:

ಬೆಂಗಳೂರು: ಖಾಸಗಿ ಶಾಲೆಗಳು ಮನಬಂದಂತೆ ಪ್ರವೇಶ ಪ್ರಕ್ರಿಯೆ ನಡೆ­ಸು­ವುದನ್ನು ನಿಯಂತ್ರಿಸಲು ಸಾರ್ವ­ಜನಿಕ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ.ಇದರನ್ವಯ 2014–15ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮಾರ್ಚ್‌ 1ರಿಂದ ಆರಂಭವಾಗಲಿದ್ದು, ಏಪ್ರಿಲ್‌ 21ರಂದು  ದಾಖಲಾತಿ ಮುಕ್ತಾಯ­ವಾಗಲಿದೆ (ಪಟ್ಟಿ ನೋಡಿ).ನಗರ ಪ್ರದೇಶಗಳ ಬಹುತೇಕ ಖಾಸಗಿ ಶಾಲೆಗಳು ಅಕ್ಟೋಬರ್‌­ನಿಂದಲೇ ಪ್ರವೇಶ ಪ್ರಕ್ರಿಯೆ ಆರಂಭಿಸಿ ಜನವರಿ ವೇಳೆಗೆ ದಾಖಲಾತಿ  ಪೂರ್ಣ­ಗೊಳಿಸುತ್ತವೆ. ಶಾಲಾ ಅಭಿವೃದ್ಧಿ ಶುಲ್ಕ ಹೆಸರಿನಲ್ಲಿ ಸಾವಿರಾರು ರೂಪಾಯಿ ವಂತಿಗೆ ಪಡೆಯುತ್ತವೆ ಎಂಬ ದೂರು­ಗಳು ಪೋಷಕರಿಂದ ಕೇಳಿಬಂದಿವೆ.ಈ ಬಗ್ಗೆ ತಡವಾಗಿ ಎಚ್ಚೆತ್ತು­ಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮೊದಲ ಬಾರಿಗೆ ಖಾಸಗಿ ಶಾಲೆಗಳಿಗೆ ಅನ್ವಯ ಆಗುವಂತೆ ಪ್ರವೇಶ ವೇಳಾಪಟ್ಟಿ ಪ್ರಕಟಿಸಿದೆ.ದಂಡ: ಪ್ರವೇಶ ನೀಡುವ ಸಂದರ್ಭ­ದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಪರೀಕ್ಷೆ ಅಥವಾ ಸಂದ­ರ್ಶನ ನಡೆಸುವುದನ್ನು ನಿಷೇಧಿಸ­ಲಾ­ಗಿದೆ. ಇದನ್ನು ಉಲ್ಲಂಘಿಸುವ ಶಾಲೆ­ಗಳಿಗೆ ಮೊದಲ ಬಾರಿ ₨ 25,000 ದಂಡ ವಿಧಿಸಲಾಗುತ್ತದೆ.ಎರಡನೇ ಬಾರಿಗೆ ತಪ್ಪು ಮಾಡಿದರೆ ₨ 50,000 ದಂಡ ವಿಧಿಸಲಾಗುವುದು ಎಂದು ಸಾರ್ವ­­ಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.ಕ್ರಮದ ಎಚ್ಚರಿಕೆ: ಶಿಕ್ಷಣ ಹಕ್ಕು ಕಾಯ್ದೆ ಅಡಿ ಶೇ 25ರಷ್ಟು ಉಚಿತ ಸೀಟುಗಳ ಪ್ರವೇಶಕ್ಕೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಇನ್ನುಳಿದ ಶೇ 75ರಷ್ಟು ಸೀಟುಗಳ ಪ್ರವೇಶಕ್ಕೂ ಈಗ ವೇಳಾಪಟ್ಟಿ ಪ್ರಕಟಿಸಲಾಗಿದೆ.ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (ಖಾಸಗಿ) ಈ ವೇಳಾಪಟ್ಟಿ ಅನ್ವಯವಾಗಲಿದೆ. ಇದರ ಪ್ರಕಾರ ಪ್ರವೇಶ ನೀಡದೆ ಇರುವ ಶಾಲೆಗಳ ಮೇಲೆ ಕ್ರಮ ಕೈಗೊ­ಳ್ಳ­ಲಾಗುವುದು ಎಂದು ಎಚ್ಚರಿಸಲಾಗಿದೆ.ಪ್ರವೇಶ ಅರ್ಜಿಗೆ ಗರಿಷ್ಠ ₨5 ಹಾಗೂ ಕೈಪಿಡಿಗೆ ಗರಿಷ್ಠ ₨20 ಪಡೆ­ಯಬಹುದು. ಅಂಕಪಟ್ಟಿ, ವರ್ಗಾವಣೆ ಪತ್ರ, ನಡತೆ ಪ್ರಮಾಣ ಪತ್ರ ಮತ್ತಿತರ ಪ್ರಮಾಣ ಪತ್ರಗಳಿಗೆ ₨ 25 ಪಡೆಯಬಹುದು.ಶುಲ್ಕ: ಅನುದಾನಿತ ಶಾಲೆಗಳು 1ರಿಂದ 5ನೇ ತರಗತಿವರೆಗಿನ ವಿದ್ಯಾ­ರ್ಥಿ­ಗಳಿಂದ ಬೋಧನೇತರ, ಬೋಧನೆ ಮತ್ತು ವಿಶೇಷ ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ. ಅನುದಾನ ರಹಿತ ಶಾಲೆಗಳು ಈ ತರಗತಿಗಳ ವಿದ್ಯಾರ್ಥಿ­ಗಳಿಂದ ₨ 600 ವರೆಗೆ ವಿಶೇಷ ಅಭಿವೃದ್ಧಿ ಶುಲ್ಕ ಪಡೆಯ­ಬಹುದು.ಬೋಧನಾ ಶುಲ್ಕವನ್ನು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್‌ 2(ಬಿ) ಅನ್ವಯ ಪಡೆಯಬೇಕು. ಬೋಧ­ನೇತರ ಶುಲ್ಕ ಪಡೆಯು­ವಂತಿಲ್ಲ. ಅನುದಾನಿತ ಶಾಲೆಗಳು 6ರಿಂದ 8ನೇ ತರಗತಿಯವರೆಗೆ ಬೋಧನಾ ಶುಲ್ಕ ಪಡೆಯುವಂತಿಲ್ಲ ಎಂದು ಸುತ್ತೋಲೆಯಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry