ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ

ಶುಕ್ರವಾರ, ಜೂಲೈ 19, 2019
28 °C

ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ

Published:
Updated:

ಗದಗ: ಸರ್ಕಾರದ ಅವೈಜ್ಞಾನಿಕ ನೀತಿಯನ್ನು ಖಂಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘ ಹಾಗೂ ವಿವಿಧ ಶಿಕ್ಷಕ, ಶಿಕ್ಷಕೇತರ ಸಂಘಟನೆಗಳ ಮಹಾಮಂಡಳದ ಸದಸ್ಯರು ಶನಿವಾರ ಶಾಲಾ, ಕಾಲೇಜು ಬಂದ್ ಮಾಡಿಸಿ ಪ್ರತಿಭಟನಾ ರ‌್ಯಾಲಿ ನಡೆಸಿದರು.ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 8ನೇ ವರ್ಗ ಪ್ರಾರಂಭಿಸುವುದನ್ನು ನಿಲ್ಲಿಸಬೇಕು. ಅನುದಾನಿತ ಪದವಿಪೂರ್ವ ಕಾಲೇಜುಗಳ ಭೋದನಾ ಶುಲ್ಕವನ್ನು ಸಂಪೂರ್ಣವಾಗಿ ಸರ್ಕಾರಕ್ಕೆ ಭರಣ ಮಾಡುವ ಆದೇಶವನ್ನು ಹಿಂಪಡೆಯಬೇಕು. ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಅನುಮತಿ ನೀಡಬೇಕು. 16 ಗಂಟೆ ಭೋದನಾ ಅವಧಿ ನಿಯಮದಲ್ಲಿ ಸಡಿಲಗೊಳಿಸಿ ಪದವಿಪೂರ್ವ ಉಪನ್ಯಾಸಕರಿಗೆ ಸೇವೆ ಅವಕಾಶ ಮಾಡಿಕೊಡಬೇಕು. ಅನುದಾನಿತ ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ 2006ರ ಏಪ್ರಿಲ್‌ನಂತರ ನೇಮಕವಾದ ಸಿಬ್ಬಂದಿಗೆ ನಿವೃತ್ತಿ ವೇತನ ಅವಕಾಶ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.ಸಂಘದ ಅಧ್ಯಕ್ಷ ಧೀರೇಂದ್ರ ಹುಯಿಲಗೋಳ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಬಸವರಾಜ ಧಾರವಾಡ ಮಾತನಾಡಿ, ಸರ್ಕಾರದ ದ್ವಂದ್ವ ನಿಲುವಿನಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ತೀವ್ರ ಆತಂಕವನ್ನು ಎದುರಿಸುವಂತಾಗಿದೆ. ಇದರ ಪರಿಹಾರಕ್ಕೆ ಹೋರಾಟ ಒಂದೇ ದಾರಿಯಾಗಿದೆ ಎಂದರು.ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತದಲ್ಲಿ ರ‌್ಯಾಲಿ ನಡೆಸಿ, ಅರ್ಧ ಗಂಟೆಗೂ  ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ಇದರಿಂದಾಗಿ ಪಾಲಾ ಬಾದಾಮಿ ರಸ್ತೆಗಳನ್ನು ಬಸ್ ಸೇರಿದಂತೆ ಇತರೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಸಂಘದ ಕಾರ್ಯಾಧ್ಯಕ್ಷ ಗಣೇಶಸಿಂಗ್ ಬ್ಯಾಳಿ, ಶ್ರೀನಿವಾಸ ಹುಯಿಲಗೋಳ, ಸೂರ್ಯನಾರಾಯಣ ನರಗುಂದಕರ, ಶಿಕ್ಷಕರ ಸಂಘಟನೆಯ ಎಸ್.ಎಂ. ಕೊಟಗಿ, ಎಸ್.ಬಿ. ತೋಟದ, ಎಂ.ಕೆ. ಲಮಾಣಿ, ಎ.ಬಿ. ಹೊನವಾಡ. ಕೆ.ಬಿ. ಭಜಂತ್ರಿ, ಎಸ್.ಎಚ್. ಅಬ್ಬಿಗೇರಿ, ಎಂ.ಎಸ್. ಚಿನ್ನೂರ, ಪ್ರೊ. ಸತೀಶ ಪಾಸಿ, ಯಶೋಧಾ ಹಿರೇಗೌಡ್ರ, ಪ್ರೊ. ಉಮೇಶ ಹಿರೇಮಠ, ಬಿ.ಕೆ. ನಿಂಬನಗೌಡರ, ಜೆ.ಟಿ. ನರಗುಂದ, ಎಸ್.ಎಚ್. ಗೊಂಡಬಾಳ, ಎಸ್.ಎಂ. ಅಗಡಿ, ಎ.ಎನ್. ನೆಗಳೂರ, ವಿಶ್ವನಾಥ ಮಾನೆ, ಸಿ.ಜಿ. ಬೀರನೂರ, ಎ.ಬಿ. ಬಿರಾದಾರ, ಎ.ಬಿ. ಬಡಿಗೇರ, ಎ.ಎಂ. ಮಡಿವಾಳರ, ಆರ್.ಎಂ. ನದಾಫ್, ಪಿ.ಎಚ್. ಇನಾಮ್‌ದಾರ, ಪೊಲೀಸ್‌ಪಾಟೀಲ, ಎ.ಎಚ್.ಅಬ್ಬಿಗೇರಿ ಹಾಜರಿದ್ದರು.ನರಗುಂದ ವರದಿ

ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಸರ್ಕಾರವು ಅನುಸರಿಸುತ್ತಿರುವ ನೀತಿ ಖಂಡಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ತಾಲ್ಲೂಕು ಘಟಕದ ಸದಸ್ಯರು ಪಟ್ಟಣದಲ್ಲಿ ಶನಿವಾರ ಶಾಲಾ ಕಾಲೇಜುಗಳನ್ನು  ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಪುರಸಭೆಯಿಂದ ಹೊರಟ ಪ್ರತಿಭಟನಾ ರ‌್ಯಾಲಿಯು ಪಟ್ಟದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌದ ತಲುಪಿತು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಕಲಾಲ ಮಾತನಾಡಿ, ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳ  ಬಗ್ಗೆ ಮಲತಾಯಿ ಧೋರಣೆ ಖಂಡನೀಯ. ತನ್ನ ಕ್ರಮ ಎಷ್ಟು ಸರಿ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು ಎಂದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಆದಷ್ಟು ಶೀಘ್ರ ಈಡೇರಿಸಬೇಕು ಎಂದು ಆಗ್ರಹಿಸಿದರು.

ಪತ್ರಿವನಮಠದ ಗುರುಸಿದ್ದವೀರ ಶಿವಯೋಗಿ ಸ್ವಾಮೀಜಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಜ್ಜು ಪಾಟೀಲ,  ಮಾತನಾಡಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಯು.ಆರ್.ಶಿರುಂದಮಠ, ಎಂ.ಎಂ,.ಗಡಾದ, ಎಸ್.ಬಿ.ಹಾರೋಗೇರಿಮಠ, ಎಸ್.ಬಿ.ಪಾಟೀಲ ಜಿ.ಬಿ.ಹಿರಮಠ, ಎಸ್.ಜಿ.ಜಕ್ಕಲಿ, ಬಿ.ಎಸ್.ಕಬಾಡ್ರ, ಉದ್ದನ್ನವರ, ಪಲ್ಲೆೀದ, ಹೂಗಾರ ಇತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry