ಖಾಸಗಿ ಶಿಕ್ಷಣ ಸಂಸ್ಥೆ: ಆಕ್ರೋಶ

7

ಖಾಸಗಿ ಶಿಕ್ಷಣ ಸಂಸ್ಥೆ: ಆಕ್ರೋಶ

Published:
Updated:

ರಾಜರಾಜೇಶ್ವರಿನಗರ: ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಹಣ ಸಂಪಾದನೆ ಮಾಡುವ ಕೇಂದ್ರಗಳಾಗಿವೆ. ಮಕ್ಕಳಿಗೆ ಅಕ್ಷರ ಕಲಿಸುವುದನ್ನು ಬಿಟ್ಟರೆ ಮಾನವೀಯ ಮೌಲ್ಯ, ದೇಶಪ್ರೇಮ ಸೇರಿದಂತೆ ಏನನ್ನೂ ಹೇಳಿಕೊಡುವುದಿಲ್ಲ ಎಂದು ಬಿಬಿಎಂಪಿ ಸದಸ್ಯ ಜಿ.ಎಚ್‌.ರಾಮಚಂದ್ರ ಹೇಳಿದರು.ಬಾಲಕೃಷ್ಣ ಬಯಲು ರಂಗ­ಮಂದಿರದಲ್ಲಿ ವಿಜಯ ಅಕಾಡೆಮಿಯ 19ನೇ ವಾರ್ಷಿಕೋತ್ಸವ ಸಮಾರಂಭ­ದಲ್ಲಿ ಭಾಗವಹಿಸಿ ಮಾತನಾಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು, ಡೊನೇಷನ್‌, ಮಾಸಿಕ ಶುಲ್ಕ ಸೇರಿದಂತೆ ಹಲವು ರೀತಿಯಲ್ಲಿ ಹಣ ವಸೂಲಿ ಮಾಡಿ ಪೋಷಕರ ರಕ್ತ ಹೀರುವ ಕೆಲಸ ಮಾಡುತ್ತಿವೆ ಎಂದರು.ವಿಜಯ ಅಕಾಡೆಮಿ ಸಂಸ್ಥೆಯ ಬಸ­ವಾನಂದ ಪ್ರಕಾಶ್‌, ಯಶಸ್ವಿನಿ ಇಂಟರ್‌ನಾಷ್ಯನಲ್‌ ಶಾಲೆಯ ಪ್ರಾಂಶು­ಪಾಲ ಬಿ.ವಿ. ನಾಗರಾಜು ಹಾಜರಿ­ದ್ದರು. ಕರ್ನಾಟಕ ಮತ್ತು ಕೇರಳ ವಿಭಾಗ­ದ ರಕ್ಷಣಾ ಇಲಾಖೆಯ ಸಿಬ್ಬಂದಿ, ಅಧಿಕಾರಿ ಕೆ.ಜೆ.ಸಿ. ಜೆಲ್ಡೊ, ಉದ್ಯಮಿ ಡಿ.ಎನ್‌.ಕಿರಣ್‌ ಮತ್ತಿತರರು ಮಾತನಾಡಿದರು. ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕಿ ಪದ್ಮಿನಿ ದಂಪತಿಯನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry