ಮಂಗಳವಾರ, ಜುಲೈ 14, 2020
27 °C

ಖಾಸಗಿ ಶೂಟಿಂಗ್ ಅಕಾಡೆಮಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ಶೂಟಿಂಗ್ ಅಕಾಡೆಮಿಗೆ ಚಾಲನೆ

ಬೆಂಗಳೂರು: ರಾಜ್ಯದ ಶೂಟಿಂಗ್ ಸ್ಪರ್ಧಿಗಳಿಗೆ ಸಂತಸದ ಸುದ್ದಿ. ಏಕೆಂದರೆ ರಾಜ್ಯದಲ್ಲಿ ಇದೇ ಪ್ರಥಮ ಖಾಸಗಿ ಶೂಟಿಂಗ್ ಅಕಾಡೆಮಿಯೊಂದು ಆರಂಭವಾಗಿದೆ. ನಗರದ ಬಿ.ಟಿ.ಎಂ. ಬಡಾವಣೆಯ ಮೈ ಕೋ ಲೇಔಟ್‌ನಲ್ಲಿ ಆರಂಭವಾಗಿರುವ ಶೂಟಿಂಗ್ ಅಕಾಡೆಮಿಯನ್ನು ಬಿಎಸ್‌ಎಫ್‌ನ ಶೂಟಿಂಗ್ ತಂಡದಲ್ಲಿದ್ದ ಅಂತರರಾಷ್ಟ್ರೀಯ ಶೂಟರ್ ಮಂಜುನಾಥ್ ಪಟ್ಟೇದಾರ್, ಪುರುಷೋತ್ತಮ ಸೇರಿದಂತೆ ಇತರ ಕ್ರೀಡಾಪಟುಗಳು ಸೇರಿ `ನಿಶಾನ್ ಶೂಟಿಂಗ್ ಸ್ಪೋರ್ಟ್ಸ್~ ಅಕಾಡೆಮಿಯನ್ನು ಆರಂಭಿಸಿದ್ದಾರೆ.`ಈ ಅಕಾಡೆಮಿಯು ಒಟ್ಟು 2,200 ಚದರ ಅಡಿ ವಿಸ್ತೀರ್ಣ ಜಾಗವನ್ನು ಹೊಂದಿದ್ದು, 177.4.5ಎಂಎಂ ಕ್ಯಾಲಿಬರ್ ಏರ್ ರೈಫಲ್, ಏರ್ ಪಿಸ್ತೂಲ್ ವಿಭಾಗಗಳಿಗೆ ತರಬೇತಿ ನೀಡಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನಡೆಸಲು ಅಗತ್ಯವಿರುವ ಹಾಗೂ ಇತರ ಅಕಾಡೆಮಿಗಳು ನೀಡುವ ತರಬೇತಿ ಕೇಂದ್ರ ಸೌಲಭ್ಯಗಳನ್ನು ಈ ಅಕಾಡೆಮಿಯಲ್ಲಿವೆ~ ಎಂದು ಮುಖ್ಯ ತರಬೇತುದಾರ ಮಂಜುನಾಥ ಪಟ್ಟೇಗಾರ ತಿಳಿಸಿದರು.`ಟಾರ್ಗೆಟ್ ಚೇಂಜಿಂಗ್ ಪುಲ್ಲಿ~ ಯಂತ್ರ ಸೌಲಭ್ಯ, ಪ್ರತಿ ಸ್ಪರ್ಧಿಗೂ ತಲಾ 50 ಏರ್ ಪಿಲೆಟ್ಸ್ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಈ ಅಕಾಡೆಮಿಯಲ್ಲಿ ನೀಡಲಾಗುತ್ತದೆ.ಚಾಲನೆ: ಇಂಧನ ಸಚಿವೆ ಶೋಭಾ ಕರಂದ್ಲಾಜೆ ಶೂಟಿಂಗ್ ಅಕಾಡೆಮಿಗೆ ಚಾಲನೆ ನೀಡಿದರು. ಅಕಾಡೆಮಿಯ ಮುಖ್ಯ ತರಬೇತುದಾರ ಮಂಜುನಾಥ ಪಟ್ಟೇಗಾರ, ಅಧ್ಯಕ್ಷೆ ಮಂಜುಳಾ ಗೌರಿ ಶಂಕರ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.