ಖಾಸಗೀಕರಣದತ್ತ ಶಿಕ್ಷಣ ಕ್ಷೇತ್ರ: ಶಾಸಕರ ವಿಷಾದ

ಸೋಮವಾರ, ಜೂಲೈ 22, 2019
26 °C

ಖಾಸಗೀಕರಣದತ್ತ ಶಿಕ್ಷಣ ಕ್ಷೇತ್ರ: ಶಾಸಕರ ವಿಷಾದ

Published:
Updated:

ಪೀಣ್ಯ ದಾಸರಹಳ್ಳಿ: `ಖಾಸಗಿ ಶಾಲೆಗಳಿಗೆ ಜನ ಮಾರು ಹೋಗುತ್ತಿರುವುದರಿಂದ ಶಿಕ್ಷಣ ಕ್ಷೇತ್ರ ಹೆಚ್ಚು ಖಾಸಗೀಕರಣಗೊಳ್ಳುತ್ತಿದೆ~ ಎಂದು ಶಾಸಕ ಎಸ್.ಮುನಿರಾಜು ವಿಷಾದಿಸಿದರು.ಟಿ.ದಾಸರಹಳ್ಳಿ ಸಮೀಪದ ಬಾಗಲಗುಂಟೆ ಸರ್ಕಾರಿ ಶಾಲೆಯ ಮಕ್ಕಳಿಗೆ ದಾನಿ ಶಂಕರೇಗೌಡ ಅವರು ನೀಡಿದ ನೋಟ್ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು. `ಬಡವರು ಕೂಡ ಸಾಲ ಸೋಲ ಮಾಡಿ ಲಕ್ಷಗಟ್ಟಲೆ ಡೊನೇಷನ್ ನೀಡಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಬೇಕೆಂದು ಆಸೆ ಪಡುತ್ತಿರುವುದರಿಂದ ಗಲ್ಲಿ ಗಲ್ಲಿಗಳಲ್ಲಿ ಖಾಸಗಿ ಶಾಲೆಗಳು ಹುಟ್ಟಿಕೊಳ್ಳುತ್ತಿವೆ~ ಎಂದರು.ಪಾಲಿಕೆ ಸದಸ್ಯ ಚಂದ್ರಶೇಖರ್, ಜಂಟಿ ಆಯುಕ್ತ ರಾಧಾಕೃಷ್ಣ, ಉಪ ಆಯುಕ್ತ ಜನ್ನಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಜಯರಂಗಪ್ಪ, ಬಿಜೆಪಿ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಗಂಗರಾಜು, ಬಿಬಿಎಂಪಿ ಅಧಿಕಾರಿ ಗೋಪಾಲಪ್ಪ, ಮುಖ್ಯೋಪಾಧ್ಯಾಯಿನಿ ದೇವಕಿ ಇತರರು ಉಪಸ್ಥಿತರಿದ್ದರು.ಬಿಬಿಎಂಪಿ ವತಿಯಿಂದ ಶಾಲೆಯಲ್ಲಿ ನಿರ್ಮಿಸಿರುವ 35 ಲಕ್ಷ ರೂಪಾಯಿ ವೆಚ್ಚದ ರಂಗಮಂದಿರವನ್ನು ಉದ್ಘಾಟಿಸಲಾಯಿತು. 1250 ಮಕ್ಕಳಿಗೆ ಒಟ್ಟು 1 ಲಕ್ಷ ರೂಪಾಯಿಯ 15 ಸಾವಿರ ಪುಸ್ತಕಗಳನ್ನು ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry