ಖುರೇಷಿ ಮೇಲೆ ಪಿಪಿಪಿ ವರಿಷ್ಠರ ಕೆಂಗಣ್ಣು

7

ಖುರೇಷಿ ಮೇಲೆ ಪಿಪಿಪಿ ವರಿಷ್ಠರ ಕೆಂಗಣ್ಣು

Published:
Updated:

ಲಾಹೋರ್ (ಪಿಟಿಐ): ಪಾಕ್ ಸರ್ಕಾರದ ಸಂಪುಟ ಪುನರ್ ರಚನೆಯಲ್ಲಿ ತಮಗೆ ನೀಡಲಾದ ಹೊಸ ಖಾತೆಯನ್ನು ನಿರಾಕರಿಸುವ ಮೂಲಕ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿರುವ ವಿದೇಶಾಂಗ ವ್ಯವಹಾರಗಳ ಮಾಜಿ ಸಚಿವ ಶಾ ಮೆಹಮೂದ್ ಖುರೇಷಿ ಅವರು ಶಿಸ್ತುಕ್ರಮ ಎದುರಿಸುವ ಸಾಧ್ಯತೆಗಳಿವೆ.ಹೊಸ ಖಾತೆ ನಿರಾಕರಿಸುವ ಮೂಲಕ ಪಕ್ಷದ ಶಿಸ್ತು ಉಲ್ಲಂಘಿಸಿರುವ ಖುರೇಷಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯ  ಒಂದು ಗುಂಪು ವರಿಷ್ಠರ  ಮೇಲೆ ತೀವ್ರ ಒತ್ತಡ ಹೇರಿದೆ. ತಮಗೆ ನೀಡಿರುವ ಜಲ ಮತ್ತು ವಿದ್ಯುತ್ ಖಾತೆಯಿಂದ ತೀವ್ರ ಅಸಮಾಧಾನಗೊಂಡ ಖುರೇಷಿ ಅವರು ಶುಕ್ರವಾರ ನಡೆದ ಸಚಿವ ಸಂಪುಟದ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.ಅವರ ಆಗಮನದ ನಿರೀಕ್ಷೆಯಲ್ಲಿ ಪ್ರಮಾಣ ವಚನ  ಸಮಾರಂಭವನ್ನು 25 ನಿಮಿಷ ಮುಂದೂಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry