ಶುಕ್ರವಾರ, ಆಗಸ್ಟ್ 7, 2020
23 °C

ಖುಷಿಯಲಿ ನಲಿದ ಸಾಧಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖುಷಿಯಲಿ ನಲಿದ ಸಾಧಕರು

ಮೈಸೂರು: ಸಭಾಂಗಣದಲ್ಲಿ ಸೇರಿದ್ದ ಸಾಧಕ ಕ್ರೀಡಾಪಟುಗಳು ಹಾಗೂ ಕೋಚ್‌ಗಳ ಮನಸ್ಸಿನಲ್ಲಿ ಖುಷಿಯು ಗೂಡು ಕಟ್ಟಿದ ಸಮಯವದು. ತಮ್ಮ ಸಾಧನೆಯನ್ನು ಸರ್ಕಾರ ಕೊನೆಗೂ ಗುರುತಿಸಿದೆಯಲ್ಲಾ ಎಂಬ ಸಂತಸ. ಕೆಲವರಿಗೆ ಮುಂದಿನ ಕ್ರೀಡಾಕೂಟಕ್ಕೆ ಹೋಗಲು ಪ್ರೋತ್ಸಾಹಧನ ಸಿಕ್ಕ ಸಂಭ್ರಮ. ತಮ್ಮ ಮಕ್ಕಳ ಆ ಕ್ಷಣವನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿ ಯುತ್ತಾ ಆನಂದಿಸಿದ್ದು ಪೋಷಕರು...ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್‌ ಭವನದಲ್ಲಿ ಕ್ರೀಡಾ ಇಲಾಖೆಯು ಮಂಗಳವಾರ ಆಯೋಜಿಸಿದ್ದ 2014ನೇ ಸಾಲಿನ ಪ್ರಶಸ್ತಿ ಪ್ರದಾನ ಹಾಗೂ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮ ದಲ್ಲಿ ಕಂಡುಬಂದ ದೃಶ್ಯವಿದು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ಸಾಧಕರಿಗೆ ‘ಏಕಲವ್ಯ’ ಪ್ರಶಸ್ತಿ, ನಾಲ್ವರು ತರಬೇತುದಾರರಿಗೆ ‘ಜೀವಮಾನ ಶ್ರೇಷ್ಠ ಸಾಧನೆ’ ಹಾಗೂ 10 ಮಂದಿ ಗ್ರಾಮೀಣ ಕ್ರೀಡಾಪಟುಗಳಿಗೆ ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು.‘ಏಕಲವ್ಯ’ ಪ್ರಶಸ್ತಿಯು ₹ 2 ಲಕ್ಷ ನಗದು ಹಾಗೂ ಫಲಕ, ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಮೊತ್ತವು ₹ 1 ಲಕ್ಷ ನಗದು ಹಾಗೂ ಫಲಕ, ‘ಜೀವಮಾನ ಶ್ರೇಷ್ಠ ಸಾಧನೆ’ ಪ್ರಶಸ್ತಿ ₹ 1.5 ಲಕ್ಷ ನಗದು ಮತ್ತು ಫಲಕ ಒಳಗೊಂಡಿದೆ.ಅಲ್ಲದೆ, ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಒಲಿಂಪಿಕ್ಸ್‌ ಸೇರಿದಂತೆ ಮೊದ ಲಾದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳು  ತ್ತಿರುವ 41 ಕ್ರೀಡಾಪಟುಗಳಿಗೆ ₹ 1.48 ಕೋಟಿ ಬಹುಮಾನ ವಿತರಿಸಿದರು. ಹೆಚ್ಚು ಮೊತ್ತ ಪಡೆದಿದ್ದು ಟೆನಿಸ್‌ ಆಟ ಗಾರ ಬಿ.ಆರ್‌. ನಿಕ್ಷೇಪ್‌ (₹ 8 ಲಕ್ಷ). ಒಲಿಂಪಿಕ್ಸ್ ಸೇರಿದಂತೆ ವಿವಿಧ ಕ್ರೀಡಾ ಕೂಟಗಳಿಗೆ ತೆರಳಲು ಅಭ್ಯಾಸ ನಿರತರಾಗಿರುವುದರಿಂದ ಕೆಲ ಕ್ರೀಡಾ ಪಟುಗಳು  ಪಾಲ್ಗೊಂಡಿರಲಿಲ್ಲ.

ಅವರ ಪರವಾಗಿ ಪೋಷಕರು ಹಾಗೂ ಸಹೋ ದರರು ಪ್ರಶಸ್ತಿ ಸ್ವೀಕರಿಸಿದರು. ಪ್ರಮುಖ ವಾಗಿ   ಖ್ಯಾತಿ ಎಸ್‌.ವಖಾರಿಯಾ (ಅಥ್ಲೀಟ್‌), ಎಂ.ಅರವಿಂದ್‌ (ಈಜುಪ ಟು), ಅರ್ಚನಾ ಕಾಮತ್‌ (ಟೇಬಲ್‌ ಟೆನಿಸ್‌), ಬಿ.ಆರ್‌. ನಿಕ್ಷೇಪ್‌ (ಟೆನಿಸ್‌), ಎಂ.ಆರ್‌. ಪೂವಮ್ಮ (ಅಥ್ಲೀಟ್‌), ರೋಹನ್‌ ಬೋಪಣ್ಣ (ಟೆನಿಸ್‌), ಅಶ್ವಿನಿ ಪೊನ್ನಪ್ಪ (ಬ್ಯಾಡ್ಮಿಂ ಟನ್‌), ಹಾಕಿ ಆಟಗಾರ ಎಸ್‌.ಕೆ.ಉತ್ತಪ್ಪ,  ರಘುನಾಥ್‌, ಎಸ್‌.ವಿ.ಸುನಿಲ್‌ ಭಾಗವಹಿಸಿರಲಿಲ್ಲ.ಪ್ರೋತ್ಸಾಹ ನೀಡಲು ಸಿದ್ಧ: ಪ್ರಶಸ್ತಿ ಪ್ರದಾನ ಮಾಡಿದ ಸಿದ್ದರಾಮಯ್ಯ, ‘ಕ್ರೀಡಾ ಇಲಾಖೆ ಯಿಂದ ಬಂದ ಯಾವುದೇ ಪ್ರಸ್ತಾ ವನೆಯನ್ನು ನಾನು ತಿರಸ್ಕರಿಸಲ್ಲ.  ಯೋಜನೆಯ ಪಟ್ಟಿ ತಯಾರಿಸಿ ಕೊಡಿ, ಹಣ ಬಿಡುಗಡೆ ಮಾಡುತ್ತೇನೆ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಲೈಂಗಿಕ ಸಾಮರ್ಥ್ಯ..!

ಕ್ರೀಡಾಸಚಿವ ಕೆ.ಅಭಯಚಂದ್ರ ಜೈನ್‌ ಅವರು ಬಾಯ್ತಪ್ಪಿ ಕ್ರೀಡೆಯಿಂದ ಲೈಂಗಿಕ, ಮಾನಸಿಕ ಸಾಮರ್ಥ್ಯ ವೃದ್ಧಿ... ಎನ್ನುತ್ತಿದ್ದಂತೆ ಸಭಾಂಗಣದಲ್ಲಿ ಹೋ... ಎಂಬ ಉದ್ಗಾರ ವ್ಯಕ್ತವಾ ಯಿತು. ತಕ್ಷಣ ವೇ ಸರಿಪಡಿಸಿಕೊಂಡ ಅವರು ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದರು.

‘ಕ್ರೀಡಾ ಉತ್ಕೃಷ್ಟ ಯೋಜನೆ ಯಡಿ ಇದೇ ಮೊದಲ ಬಾರಿ ವಿಶ್ವ ಚಾಂಪಿ ಯನ್‌ಷಿಪ್‌, ಒಲಿಂಪಿಕ್ಸ್‌ ಸೇರಿ ದಂತೆ  ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲಲು ಸಾಮರ್ಥ್ಯವಿರುವ ಕ್ರೀಡಾ ಪಟುಗಳನ್ನು ಗುರುತಿಸಿ ಆರ್ಥಿಕ ನೆರವು ನೀಡಲಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.