ಬುಧವಾರ, ನವೆಂಬರ್ 20, 2019
21 °C

ಖುಷಿ ನೀಡಿದೆ: ಸೋಮ್

Published:
Updated:

ಬೆಂಗಳೂರು: `ನಾನು ಚೆನ್ನಾಗಿ ಆಡಿದೆ. ಇದರಿಂದ ಸುಲಭ ಗೆಲುವು ದೊರೆಯಿತು. ಭಾರತಕ್ಕೆ ಮುನ್ನಡೆ ದೊರಕಿಸಿಕೊಡಲು ಸಾಧ್ಯವಾಗಿರುವುದು ಸಂತಸ ನೀಡಿದೆ' ಎಂದು ಸೋಮದೇವ್ ದೇವವರ್ಮನ್ ಪ್ರತಿಕ್ರಿಯಿಸಿದರು.`ಇಲ್ಲಿನ ಪರಿಸ್ಥಿತಿ ನನಗೆ ನೆರವು ನೀಡಿತು. ಇದು ಕೂಡಾ ಸುಲಭ ಗೆಲುವಿಗೆ ಕಾರಣ' ಎಂದು ಇಂಡೊನೇಷ್ಯಾದ ವಿಸ್ನು ಆದಿ ನುಗ್ರೊಹೊ ವಿರುದ್ಧ ಗೆಲುವು ಪಡೆದ ಭಾರತದ ಅಗ್ರ ರ‌್ಯಾಂಕ್‌ನ ಆಟಗಾರ ನುಡಿದರು.`ವಿಸ್ನು ಅವರನ್ನು ಈ ಮೊದಲು ಎದುರಿಸಿರಲಿಲ್ಲ. ಆದ್ದರಿಂದ ಒಬ್ಬ ಆಟಗಾರರನ್ನು ಮೊದಲ ಬಾರಿ ಎದುರಿಸುವ ಸಂದರ್ಭ ಎಚ್ಚರಿಕೆ ವಹಿಸಬೇಕು. ನಾನು ಕೂಡಾ ಆರಂಭದಲ್ಲಿ ಎದುರಾಳಿಯ ಶಕ್ತಿ ಹಾಗೂ ದೌರ್ಬಲ್ಯ ಏನೆಂಬುದನ್ನು ಅರಿತುಕೊಳ್ಳಲು ಪ್ರಯತ್ನಿಸಿದೆ. ಆ ಬಳಿಕ ನೈಜ ಪ್ರದರ್ಶನ ನೀಡಿದೆ' ಎಂದರು.ಮೊದಲ ಪಂದ್ಯದಲ್ಲಿ ಗೆಲುವು ಪಡೆದ ಯೂಕಿ ಭಾಂಬ್ರಿ ಕೂಡಾ ತಮ್ಮ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. `ಶನಿವಾರ ನಡೆಯವ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಮತ್ತು ಸನಮ್ ಸಿಂಗ್ ಗೆಲ್ಲುವ ವಿಶ್ವಾಸ ಇದೆ. ನಮ್ಮದು ಬಲಿಷ್ಠ ತಂಡ' ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)