ಶನಿವಾರ, ಮಾರ್ಚ್ 6, 2021
21 °C

ಖುಷ್ವಂತ್ ಸಿಂಗ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖುಷ್ವಂತ್ ಸಿಂಗ್ ನಿಧನ

ನವದೆಹಲಿ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಖ್ಯಾತ ಬರಹಗಾರ ಮತ್ತು ಹಿರಿಯ ಪತ್ರಕರ್ತ ಖುಷ್ವಂತ್ ಸಿಂಗ್  (99) ಅವರು ಗುರುವಾರ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು.

ತಮ್ಮ ಮೊನಚಾದ ನಿರ್ಭಿತ ಬರವಣಿಗೆಯಿಂದ ಇಂಗ್ಲಿಷ್ ಸಾರಸತ್ವ ಲೋಕದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ  ಖುಷ್ವಂತ್ ಅವರು ಜಾತ್ಯತೀತ ವಾದಕ್ಕೆ ಹೆಸರಾಗಿದ್ದರು. 

ಪಂಜಾಬಿನ ಹದಾಲಿ ಗ್ರಾಮದಲ್ಲಿ (ಈಗ ಪಾಕಿಸ್ತಾನದಲ್ಲಿದೆ) 1915ರಲ್ಲಿ ಜನಿಸಿದ ಖುಷ್ವಂತ್ ಅವರು ಯೋಜನಾ, ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಸೇರಿದಂತೆ ಭಾರತದ ಪ್ರಮುಖ ಎರಡು ಪತ್ರಿಕೆಗಳಾದ ದಿ ನ್ಯಾಷನಲ್ ಹೆರಾಲ್ಡ್ ಮತ್ತು ದಿ ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

1980–86ರ ವರೆಗೆ ರಾಜ್ಯಸಭೆ ಸದಸ್ಯರಾಗಿದ್ದ ಇವರಿಗೆ 1974ರಲ್ಲಿ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಆದರೆ ಖುಷ್ವಂತ್ ಅವರು ಆ ಪ್ರಶಸ್ತಿಯನ್ನು ಅಮೃತಸರದ ಸ್ವರ್ಣ ಮಂದಿರದ ಮೇಲೆ ಸರ್ಕಾರ ನಡೆಸಿದ ಬ್ಲೂಸ್ಟಾರ್‍ ಆಪರೇಷನ್ ಕಾರ್ಯಾಚರಣೆ ನಡೆಸಿದ್ದನ್ನು ಪ್ರತಿಭಟಿಸಿ ಹಿಂದಿರುಗಿಸಿದ್ದರು. ಬಳಿಕ 2007ರಲ್ಲಿ ಭಾರತ ಸರ್ಕಾರ ಸಿಂಗ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.  

ಟ್ರೈನ್ ಟು ಪಾಕಿಸ್ತಾನ್, ದಿಲ್ಲಿ, ದಿ ಕಂಪೆನಿ ಆಫ್ ವುಮನ್ ಅವರು ಬರೆದ ಪ್ರಸಿದ್ಧ ಪುಸ್ತಕಗಳಾಗಿವೆ. ಖುಷ್ವಂತ್ ಸಿಂಗ್ ಬರೆದ ಕೊನೆಯ ಪುಸ್ತಕ ‘ದಿ ಗಾಡ್, ದಿ ಬ್ಯಾಡ್ ಆ್ಯಂಡ್ ದಿ ರೆಡಿಕ್ಯುಲಸ್’ ಅಕ್ಟೋಬರ್ 2013ರಲ್ಲಿ ಪ್ರಕಟಗೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.