ಶನಿವಾರ, ಏಪ್ರಿಲ್ 17, 2021
32 °C

ಖೇಲ್ ರತ್ನ ಪ್ರಶಸ್ತಿ ಆಯ್ಕೆ ಸಮಿತಿಗೆ ರಾಥೋಡ್ ಮುಖ್ಯಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಥೆನ್ಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಶೂಟರ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಈ ಬಾರಿಯ ರಾಜೀವ್ ಗಾಂಧಿ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.ದ್ರೋಣಾಚಾರ್ಯ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ಭಾರತ ಹಾಕಿ ತಂಡದ ಮಾಜಿ ನಾಯಕ ಅಸ್ಲಂ ಶೇರ್ ಖಾನ್ ಅವರನ್ನು ನೇಮಿಸಲಾಗಿದೆ.ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿ ಆಯ್ಕೆ ಸಮಿತಿ: ಮುಖ್ಯಸ್ಥ: ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ (ಶೂಟಿಂಗ್). ಸದಸ್ಯರು: ರಾಜೇಶ್ ಕುಮಾರ್ (ಕುಸ್ತಿ), ಅಶ್ವಿನಿ ನಾಚಪ್ಪ (ಅಥ್ಲೆಟಿಕ್), ಅಪರ್ಣಾ ಪೋಪಟ್ (ಬ್ಯಾಡ್ಮಿಂಟನ್), ಅಖಿಲ್ ಕುಮಾರ್ (ಬಾಕ್ಸಿಂಗ್), ಕಜಾನ್ ಸಿಂಗ್ (ಈಜು), ಬೈಚುಂಗ್ ಭುಟಿಯಾ (ಫುಟ್‌ಬಾಲ್), ಜಿ.ಮುಲಿನಿ ರೆಡ್ಡಿ (ವಾಲಿವಾಲ್), ಕರ್ನಲ್ ಕೆ.ಎಸ್.ಗಾರ್ಚಾ (ಪೋಲೊ), ರವಿಶಾಸ್ತ್ರಿ (ಕ್ರಿಕೆಟ್), ಕರ್ನಲ್ ಜೆ.ಎಸ್.ಸರಣ್ (ಆಫೀಸರ್ -ಆರ್ಮಿ ಮಾರ್ಕ್ಸ್‌ಮನ್ ಯುನಿಟ್), ಮನೋಜ್ ಯಾದವ್ (ಆಲ್ ಇಂಡಿಯಾ ಪೊಲೀಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ಕಾರ್ಯದರ್ಶಿ), ಗೋಪಾಲ್ ಕೃಷ್ಣ (ಭಾರತ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ), ಓಂಕಾರ್ ಕೇಡಿಯಾ (ಕ್ರೀಡಾ ಜಂಟಿ ಕಾರ್ಯದರ್ಶಿ) ಹಾಗೂ ಸಿ.ಚಿನ್ನಪ್ಪ (ಕ್ರೀಡಾ ನಿರ್ದೇಶಕ).   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.