ಭಾನುವಾರ, ಅಕ್ಟೋಬರ್ 20, 2019
27 °C

ಖೋಟಾ ನೋಟು ಚಲಾವಣೆ: ಬಂಧನ

Published:
Updated:

ಬೆಂಗಳೂರು:  ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಯುವಕನೊಬ್ಬನನ್ನು ಕೃಷ್ಣರಾಜಪುರ ಉಪ ವಿಭಾಗದ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಸಲೀಂ ಶೇಖ್ (19) ಬಂಧಿತ ಆರೋಪಿ. ದೇವಸಂದ್ರ ಸಮೀಪದ ಅಣ್ಣಯ್ಯಪ್ಪ ಬಡಾವಣೆಯಲ್ಲಿರುವ ಟೈಲರ್ ರಾಜು ಕಟ್ಟಡದ ಮೊದಲನೆ ಮಹಡಿಯ ಮನೆಯೊಂದರಲ್ಲಿ ವಾಸವಾಗಿದ್ದ ಸಲೀಂ, ಖೋಟಾ ನೋಟು ಚಲಾವಣೆ ಮಾಡುತ್ತಿದ್ದ. ಇದರ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಿ, ಸಾವಿರ ರೂಪಾಯಿ ಮುಖಬೆಲೆಯ ಒಟ್ಟು 70 ಸಾವಿರ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೂರ್ವ ವಿಭಾಗದ ಡಿಸಿಪಿ ಎಂ.ಚಂದ್ರಶೇಖರ್ ಹಾಗೂ ಕೃಷ್ಣರಾಜಪುರ ಉಪ ವಿಭಾಗದ ಎಸಿಪಿ ಡಿ.ನಾರಾಯಣ್‌ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ಗಳಾದ ಮಂಜುನಾಥ್ ಜಿ. ಹಿರೇಮಠ್, ಎಂ. ಮಲ್ಲಿಕಾರ್ಜುನ್ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

Post Comments (+)