ಖೋಟಾ ನೋಟು ಪತ್ತೆ

ಬುಧವಾರ, ಜೂಲೈ 24, 2019
24 °C

ಖೋಟಾ ನೋಟು ಪತ್ತೆ

Published:
Updated:

ಚನ್ನಪಟ್ಟಣ: ಇಲ್ಲಿನ ಕಾಶಿ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಗ್ಯಾಸ್ ಬುಕ್ಕಿಂಗ್ ಮಾಡಲು ಬಂದ ಗ್ರಾಹಕರು ನೀಡಿದ ಹಣದಲ್ಲಿ ಖೋಟಾ ನೋಟುಗಳು ಪತ್ತೆಯಾಗಿರುವ ಘಟನೆ ಬುಧವಾರ ಕಂಡು ಬಂದಿದೆ. ಏಜೆನ್ಸಿ ಸಿಬ್ಬಂದಿ ಗ್ರಾಹಕರಿಂದ ಪಡೆಯುತ್ತಿದ್ದ ಹಣವನ್ನು ಖೋಟಾನೋಟು ಪತ್ತೆ ಹಚ್ಚುವ ಯಂತ್ರದಲ್ಲಿ ಪರೀಕ್ಷಿಸುತ್ತಿದ್ದ ವೇಳೆ 50, 100, 500, 1000 ರೂ. ಮುಖಬೆಲೆಯ ಹಲವಾರು ಖೋಟಾ ನೋಟುಗಳು ದೊರೆತಿವೆ.

ನೋಟುಗಳು ಕಂಡುಬಂದ ತಕ್ಷಣ ಏಜೆನ್ಸಿಯವರು ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ.ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ನೋಟುಗಳನ್ನು ವಶಕ್ಕೆ ತೆಗೆದುಕೊಂಡು, ಅವುಗಳನ್ನು ನೀಡಿದವರನ್ನು ಪ್ರಶ್ನಿಸಲಾಗಿ ಅವರು ತಾವು ಪಟ್ಟಣದ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಅಲ್ಲಿ ಪಡೆದವು ಎಂಬ ಉತ್ತರ ಬಂದಿದೆ. ಹಲವಾರು ಮಂದಿಯ ಬಳಿ ಇಂಥದ್ದೇ ನೋಟುಗಳಿದ್ದರಿಂದ ಪಟ್ಟಣದಲ್ಲಿ ಖೋಟಾನೋಟು ಜಾಲ ಸಕ್ರಿಯವಾಗಿರುವ ಬಗ್ಗೆ ಈಗ ಗುಮಾನಿ ಎದ್ದಿದೆ.ಕಳೆದ ವಾರವಷ್ಟೇ ಪಟ್ಟಣದ ಜೆ.ಸಿ.ರಸ್ತೆಯ ಬಟ್ಟೆ ಅಂಗಡಿಯೊಂದರಲ್ಲಿ ಬಟ್ಟೆ ಖರೀದಿಸುವ ವೇಳೆ ಬಾಲಕನೊಬ್ಬ ಖೋಟಾನೋಟೊಂದನ್ನು ನೀಡಿ ಸಿಕ್ಕಿಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈಗ ಸಿಕ್ಕಿರುವ ಖೋಟಾನೋಟುಗಳಿಂದ ಇದರ ಹಿಂದೆ ಒಂದು ಜಾಲವೇ ಕಾರ್ಯ ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವ ಗುಮಾನಿಗೆ ಪುಷ್ಟಿ ಬಂದಂತಾಗಿದೆ.ಗ್ಯಾಸ್ ಬುಕ್ಕಿಂಗ್‌ಗೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದವರೇ ಹೆಚ್ಚಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆಯಲ್ಲೇ ಖೋಟಾನೋಟುಗಳು ಪತ್ತೆಯಾಗಿರುವುದರಿಂದ ಈ ಜಾಲವು ಪಟ್ಟಣಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶಕ್ಕೂ ಹರಡಿರುವ ಅನುಮಾನಗಳಿವೆ.ತಮ್ಮ ಬಳಿಯಿರುವ ನೋಟುಗಳು ಅಸಲಿಯೋ, ನಕಲಿಯೋ ಎಂಬುದನ್ನು ತಿಳಿಯಲಾರದ ಸಾರ್ವಜನಿಕರು ಗಾಬರಿಗೊಂಡ್ದ್ದಿದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry