ಭಾನುವಾರ, ನವೆಂಬರ್ 17, 2019
29 °C

ಖೋಟಾ ನೋಟು: ಬಂಧನ

Published:
Updated:

ಶಿಡ್ಲಘಟ್ಟ: ಖೋಟಾ ನೋಟು ಹೊಂದಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಒಂದು ಸಾವಿರ ಮುಖ ಬೆಲೆಯ 94 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.ಖಚಿತ ಮಾಹಿತಿ ಮೇರೆಗೆ ಆರೋಪಿ ರಹಮತ್‌ನಗರದ ನಿವಾಸಿ ಟೈಲರ್ ಸಲಾಂ (45) ಬಂಧಿತ ಆರೋಪಿ. ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯಲ್ಲಿನ ಕೆಇಬಿ ಸಬ್‌ಸ್ಟೇಷನ್ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಚಿಂತಾಮಣಿ ತಾಲ್ಲೂಕಿನ ಎಂ.ಗೊಲ್ಲಹಳ್ಳಿ ಮೂಲದ ಆರೋಪಿ ಸಲಾಂ ಪೊಲೀಸರನ್ನು ಕಂಡು ಓಡಲೆತ್ನಿಸಿದ್ದಾನೆ. ಆಗ ಪೊಲೀಸರು ಪರಿಶೀಲಿಸಿದಾಗ ಜೇಬಿನಲ್ಲಿ 94 ಸಾವಿರ ರೂಪಾಯಿ ಖೋಟಾ ನೋಟು ಪತ್ತೆಯಾಗಿವೆ.

ಪ್ರತಿಕ್ರಿಯಿಸಿ (+)