ಖೋಸ್ಲಾ ಕ್ಯಾಲಿಫೋರ್ನಿಯಾ ವಿ.ವಿ ಕುಲಪತಿ

7

ಖೋಸ್ಲಾ ಕ್ಯಾಲಿಫೋರ್ನಿಯಾ ವಿ.ವಿ ಕುಲಪತಿ

Published:
Updated:

ಹ್ಯೂಸ್ಟನ್ (ಪಿಟಿಐ): ಐಐಟಿಯ ಹಳೆ ವಿದ್ಯಾರ್ಥಿ, ಭಾರತೀಯ ಮೂಲದ ಪ್ರದೀಪ್ ಖೋಸ್ಲಾ ಅವರನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಲಾಗಿದೆ.55 ವರ್ಷ ವಯಸ್ಸಿನ ಕೋಸ್ಲಾ ಅವರು ಪ್ರಸ್ತುತ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಕಾಲೇಜಿನ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಖೋಸ್ಲಾ ಅವರನ್ನು ಕುಲಪತಿಯಾಗಿ ನೇಮಕ ಮಾಡಿರುವುದನ್ನು ಕ್ಯಾಲಿಫೋರ್ನಿಯಾ ವಿವಿಯ ಅಧ್ಯಕ್ಷ ಮಾರ್ಕ್ ಯುಡೊಫ್ ಘೋಷಿಸಿದರು. ಖೋಸ್ಲಾ ನೇಮಕವನ್ನು ಮೇ 16ರಂದು ವಿ.ವಿ ಆಡಳಿತ ಮಂಡಳಿ ಸದಸ್ಯರು ಅಧಿಕೃತವಾಗಿ ದೃಢಪಡಿಸಲಿದ್ದಾರೆ . 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry