ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಇನ್ನಿಲ್ಲ

ಬುಧವಾರ, ಜೂಲೈ 24, 2019
23 °C

ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಇನ್ನಿಲ್ಲ

Published:
Updated:

 ಲಂಡನ್/ ನವದೆಹಲಿ (ಐಎಎನ್ಎಸ್): ಹೆಸರಾಂತ ಚಿತ್ರಕಲಾವಿದ ಎಂ.ಎಫ್. ಹುಸೇನ್  (95) ಗುರುವಾರ ಲಂಡನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಹುಸೇನ್ ಕುಟುಂಬದ ಮೂಲಗಳು ತಿಳಿಸಿವೆ.

ತಮ್ಮ 20ನೇ ವಯಸ್ಸಿನಲ್ಲಿ ಮುಂಬೈಗೆ ಬಂದ ಅವರು ಚಲನಚಿತ್ರಗಳ ಜಾಹೀರಾತು ಪಟಗಳನ್ನು ಬಿಡಿಸುವುದರೊಂದಿಗೆ  ಬದುಕನ್ನು ಆರಂಭಿಸಿದ್ದರು. ಅವರು ಮುಂದೆ ಹಂತ ಹಂತವಾಗಿ ಬೆಳೆದು ಅಂತರಾಷ್ಟ್ರೀಯ ಮಟ್ಟದ ಕಲಾವಿದರಾಗಿ ಹೆಸರು ಗಳಿಸಿದ್ದರು.  

ಹಿಂದು ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ್ದರಿಂದ ಅವರು ವಿವಾದಕ್ಕೆ ಒಳಗಾಗಿದ್ದರು. ಬಲಪಂಥೀಯ ಸಂಘಟನೆಗಳು ಅವರ ಇಂಥ ಕಲಾಕೃತಿಗಳ ಬಗ್ಗೆ ತೀವ್ರ ಪ್ರತಿಭಟನೆ ನಡೆಸಿದ್ದವು. ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅವರಿಗೆ ಜೀವ ಬೆದರಿಕೆ ಎದುರಾದಾಗ ಅವರು ಲಂಡನ್ ಗೆ ಹೋಗಿ ನೆಲಸಿದ್ದರು.

ಬಾಲಿವುಡ್ ನಟಿ ಮಾಧುರಿ ದಿಕ್ಷಿತ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಹುಸೇನ್ ಅವರು ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry