ಖ್ಯಾತ ಕಲಾವಿದ ಹುಸೇನ್ ಇನ್ನಿಲ್ಲ

ಗುರುವಾರ , ಜೂಲೈ 18, 2019
26 °C

ಖ್ಯಾತ ಕಲಾವಿದ ಹುಸೇನ್ ಇನ್ನಿಲ್ಲ

Published:
Updated:

ಲಂಡನ್ (ಪಿಟಿಐ): `ಭಾರತದ ಪಿಕಾಸೊ~ ಎಂದೇ ಹೆಸರಾಗಿದ್ದ ಹಾಗೂ ತಮ್ಮ ಕಲಾಕೃತಿಗಳಿಂದಾಗಿ ಭಾರಿ ಜನಪ್ರಿಯತೆಯ ಜತೆಗೆ ತೀವ್ರ ವಿವಾದಗಳಿಗೂ ಗುರಿಯಾಗಿದ್ದ ಚಿತ್ರಕಲಾವಿದ ಮಕ್ಬೂಲ್ ಫಿದಾ ಹುಸೇನ್ ಬುಧವಾರ ರಾತ್ರಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.95 ವರ್ಷದ ಹಿರಿಯ ಚೇತನವಾಗಿದ್ದ ಅವರು ಸ್ಥಳೀಯ ಕಾಲಮಾನ ಮಧ್ಯರಾತ್ರಿ 2.30ಕ್ಕೆ (ಅಂತರರಾಷ್ಟ್ರೀಯ ಕಾಲಮಾನ ಬೆಳಿಗ್ಗೆ 7) ಅಸ್ತಂಗತರಾದರು. ಅಸ್ವಸ್ಥಗೊಂಡಿದ್ದ ಅವರು ಒಂದೂವರೆ ತಿಂಗಳ ಹಿಂದೆ ರಾಯಲ್ ಬ್ರಾಂಪ್ಟನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹುಸೇನ್ ಅವರಿಗೆ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ. ಅವರು ಮುಂಬೈ ಮತ್ತು ದುಬೈನಲ್ಲಿ ನೆಲಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry