ಸೋಮವಾರ, ಮೇ 17, 2021
27 °C

ಖ್ಯಾತ ಗಜಲ್ ಗಾಯಕ ಜಗ್ ಜಿತ್ ಸಿಂಗ್ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖ್ಯಾತ ಗಜಲ್ ಗಾಯಕ ಜಗ್ ಜಿತ್ ಸಿಂಗ್ ಇನ್ನಿಲ್ಲ

ಮುಂಬೈ, (ಪಿಟಿಐ):  ಹಜಾರೊ ಖ್ವಾಯಿಶೆ ಐಸಿ,  ಎ ಕಾಗಜ ಕಿ ಕಸ್ತಿ ಮತ್ತು  ಝುಕಿ ಝುಕಿಸೇ ನಜರ್ ಮೊದಲಾದ ಗಜಲ್ ಹಾಡುಗಳಿಗೆ ತಮ್ಮ ಧ್ವನಿಯಿಂದ ಜೀವ ತುಂಬಿ ಶ್ರೋತೃಗಳ ಮನಸೂರೆಗೊಂಡಿದ್ದ  ಗಜಲ್ ಅರಸನೆಂದೇ ಖ್ಯಾತರಾಗಿದ್ದ ಗಾಯಕ ಜಗ್ ಜಿತ್ ಸಿಂಗ್  (70) ಸೋಮವಾರ ಬೆಳಿಗ್ಗೆ 8.10ರ ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರು ಹದಿನೈದು ದಿನಗಳಿಂದ ಮಿದುಳು ರಕ್ತ ಸ್ರಾವದಿಂದ ಬಳಲುತ್ತಿದ್ದರು.

ತಮ್ಮ ಪತ್ನಿ ಚಿತ್ರಾಳೊಂದಿಗೆ ಸೇರಿಕೊಂಡು ಕಳೆದ 70 ಮತ್ತು 80ರ ದಶಕಗಳಲ್ಲಿ ಜನ  ಸಾಮಾನ್ಯರಿಗೆ ಗಜಲ್ ಗೀಳು ಹಚ್ಚಿಸಿದ್ದ ಜಗ್ ಜಿತ್ ಸಿಂಗ್ ಅವರು, ಮಿದುಳು ರಕ್ತಸ್ರಾವದ ಕಾರಣ  ಸೆಪ್ಟೆಂಬರ್ 23 ರಿಂದ ಇಲ್ಲಿನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಇದುವರೆಗೆ ಕೋಮಾ ಸ್ಥಿತಿಯಲ್ಲಿಯೇ ಇದ್ದರು. 

ರಾಜಸ್ತಾನದ ಶ್ರೀಗಂಗಾನಗರ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಜಗ್ ಜಿತ್  ಸಿಂಗ್  ಅವರ ಹುಟ್ಟೂರು. ಪದವಿ ಪರೀಕ್ಷೆ ಪಾಸಾಗುತ್ತಿದ್ದಂತೆಯೇ ಸಂಗೀತದ ಬದುಕು ಅರಸಿಕೊಂಡು ಮುಂಬೈಗೆ ಬಂದ ಅವರು, ಗಜಲ್ ಹಾಡುಗಾರ ಹಾಗೂ ಸಂಗೀತ ಸಂಯೋಜರಕಾಗಿ ಹೆಸರು ಮಾಡಿದರು. ಅವರು ಹಿಂದಿ ಭಾಷೆಯಲ್ಲಲ್ಲದೇ ಪಂಜಾಬಿ, ಬೆಂಗಾಲಿ, ಗುಜರಾತಿ ಮತ್ತು ನೇಪಾಳಿ ಭಾಷೆಗಳಲ್ಲೂ ಹಾಡಿದ್ದಾರೆ. 

ಅವರ ಸಾವಿಗೆ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಬಾಲಿವುಡ್ ನ  ಖ್ಯಾತನಾಮರು ಕಂಬನಿ ಮಿಡಿದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.