ಖ್ಯಾತ ತಮಿಳು ಚಿತ್ರ ನಟಿ ಎಸ್.ಎನ್. ಲಕ್ಷ್ಮಿ ನಿಧನ

7

ಖ್ಯಾತ ತಮಿಳು ಚಿತ್ರ ನಟಿ ಎಸ್.ಎನ್. ಲಕ್ಷ್ಮಿ ನಿಧನ

Published:
Updated:

ಚೆನ್ನೈ (ಪಿಟಿಐ): ಬಹುತೇಕ ಚಿತ್ರಗಳಲ್ಲಿ ~ತಾಯಿ~ಯ ಪಾತ್ರ ವಹಿಸಿದ್ದ ಖ್ಯಾತ ತಮಿಳು ಚಿತ್ರ ನಟಿ ಎಸ್.ಎನ್. ಲಕ್ಷ್ಮಿ ಕಳೆದ ರಾತ್ರಿ (ಭಾನುವಾರ ರಾತ್ರಿ) ಹೃದಯಾಘಾತದ ಪರಿಣಾಮವಾಗಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.ಕೆಲವು ದಿನಗಳ ಹಿಂದೆ ಲಕ್ಷ್ಮಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸೋಮವಾರ ನಸುಕಿನ ವೇಳೆ 1 ಗಂಟೆಗೆ ಅವರು ಅಸು ನೀಗಿದರು. ಅವರ ಪಾರ್ಥಿವ ಶರೀರವನ್ನು ಇಲ್ಲಿನ ಸಾಲಿಗ್ರಾಮದಲ್ಲಿನ ಅವರ ನಿವಾಸಕ್ಕೆ ತರಲಾಯಿತು.ವಿರುಧನಗರ ಜಿಲ್ಲೆಯಲ್ಲಿನ ಹುಟ್ಟೂರಿನಲ್ಲಿ ಲಕ್ಷ್ಮಿ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿರುವ ಲಕ್ಷ್ಮಿ ಅವರು ~ಮೈಕೆಲ್ ಮದನ ಕಾಮರಾಜ್~, ~ಮಹಾನದಿ~, ~ಕಾಧಲ ಕಾಧಲ~ ಚಿತ್ರಗಳಲ್ಲಿನ ಪಾತ್ರಗಳಿಂದ ಖ್ಯಾತರಾಗಿದ್ದರು. ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್, ರಜನೀಕಾಂತ್ ಮತ್ತು ಕಮಲ ಹಾಸನ್ ಮತ್ತಿತರ ಖ್ಯಾತ ನಟರೊಂದಿಗೆ ಅವರು ನಟಿಸಿದ್ದರು.ರಾಜ್ಯ ಸರ್ಕಾರದ ಪ್ರತಿಷ್ಠಿತ  ~ಕಲೈಮಾಮನಿ~, ~ಕಲೈಸೆಲ್ವಂ~ ಮತ್ತಿತರ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಲಕ್ಷ್ಮಿ 1500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಲ್ಲದೆ, 6000ಕ್ಕೂ ಹೆಚ್ಚು ನಾಟಕಗಳಲ್ಲೂ ನಟಿಸಿದ್ದರು.ಲಕ್ಷ್ಮಿ ಅವರ ಸಾವು ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂಬುದಾಗಿ ಮುಖ್ಯಮಂತ್ರಿ ಜಯಲಲಿತಾ ಶೋಕ ವ್ಯಕ್ತ ಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry