ಗುರುವಾರ , ನವೆಂಬರ್ 21, 2019
21 °C

ಖ್ರುಶ್ಚೋವ್ ಹೋಗಲೇಬೇಕೆಂದು ಮಾವೊ

Published:
Updated:

ಖ್ರುಶ್ಚೋವ್ ಹೋಗಲೇಬೇಕೆಂದು ಮಾವೊ

ಲಂಡನ್, ಏ. 22 - ಖ್ರುಶ್ಚೋವ್ ಅವರು ಇನ್ನೆರಡು ವರ್ಷಗಳಲ್ಲಿ ನಿವೃತ್ತರಾಗುವ ಅಪೇಕ್ಷೆ ವ್ಯಕ್ತಪಡಿಸಿರುವರೆಂಬ ವರದಿಯಿಂದ ಅವರು ತಾವಾಗಿಯೇ ನಿವೃತ್ತರಾಗುವರೇ ಅಥವಾ ಬಲವಂತ ನಿವೃತ್ತಿಯೇ ಎಂಬ ಬಗ್ಗೆ ಇಲ್ಲಿ ಊಹಾಪೋಹಗಳೆದ್ದಿವೆ.ಕೆಲವು ದಿನಗಳಿಂದ ಕ್ರೆಮ್ಲಿನ್‌ನಲ್ಲಿ ಅಧಿಕಾರಕ್ಕೆ ಸೆಣಸಾಟಸೆಣಸಾಟ ನಡೆಯುತ್ತಿದೆ ಎಂಬ ವದಂತಿಗಳಿಗೆ  ಸಮರ್ಥನೆ ದೊರೆತಂತಾಗಿದೆ.

ಉಚಿತ ಪಠ್ಯ ಪುಸ್ತಕ

ಬೆಂಗಳೂರು, ಏ. 22 - ರಾಜ್ಯದ ಎಂಟು ಲಕ್ಷ ವಿದ್ಯಾರ್ಥಿಗಳು ಮುಂದಿನ ಜೂನ್ ತಿಂಗಳಿಂದ ಉಚಿತವಾಗಿ ರಾಷ್ಟ್ರೀಕರಣ ಮಾಡಲಾದ ಪಠ್ಯ ಪುಸ್ತಕಗಳನ್ನು ಪಡೆಯಲಿದ್ದಾರೆಂದು ತಿಳಿದು ಬಂದಿದೆ.

ಪ್ರತಿಕ್ರಿಯಿಸಿ (+)