ಮಂಗಳವಾರ, ಆಗಸ್ಟ್ 4, 2020
23 °C

ಗಂಗಾಕಲ್ಯಾಣ ಯೋಜನೆ: 16,000 ಕೊಳವೆಬಾವಿ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ಮೂರು ನಿಗಮಗಳಿಂದ `ಗಂಗಾಕಲ್ಯಾಣ~ ಯೋಜನೆಯಡಿ 2009-10 ಮತ್ತು 2010-11ನೇ ಸಾಲಿನಲ್ಲಿ 26,000 ನೀರಾವರಿ ಕೊಳವೆಬಾವಿ ನಿರ್ಮಿಸುವ ಗುರಿ ಹೊಂದಿದ್ದು, ಈಗಾಗಲೇ 16,000 ಕೊಳವೆಬಾವಿ ನಿರ್ಮಿಸಲಾಗಿದೆ ಎಂದು ಸಮಾಜಕಲ್ಯಾಣ ಮತ್ತು ಬಂದೀಖಾನೆ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಂದ ಆಯ್ದ ಫಲಾನುಭಗಳಿಗೆ `ಗಂಗಾಕಲ್ಯಾಣ~ ಯೋಜನೆಯ ಪಂಪ್‌ಮೋಟಾರ್ ಹಾಗೂ ಸಾಲದ ಚೆಕ್ ವಿತರಿಸಿ ಮಾತನಾಡಿ, ಕೊಳವೆಬಾವಿಗಳಿಗೆ ಪಂಪ್, ಮೋಟಾರ್ ಹಾಗೂ ಇತರೆ ಸಾಮಗ್ರಿಗಳನ್ನು ಸರಬರಾಜು ಮಾಡಲು 19 ಕಂಪೆನಿಗಳಿಗೆ ಆದೇಶ ನೀಡಲಾಗಿದೆ.ಆಯಾ ಜಿಲ್ಲೆಗಳಿಗೆ ನೇಮಕಗೊಂಡ ಕಂಪೆನಿಗಳು ಈಗಾಗಲೇ ಪಂಪ್, ಮೋಟಾರ್ ಇತರ ಸಾಮಗ್ರಿ ಪೂರೈಸುತ್ತಿದ್ದು, ಇನ್ನು ಮೂರು ತಿಂಗಳಲ್ಲಿ ಇವುಗಳನ್ನು ಅಳವಡಿಸುವ ಕಾರ್ಯ ಮುಗಿಯುವುದು. ವಿದ್ಯುದೀಕರಣಕ್ಕಾಗಿ ಬಾಕಿಯಿರುವ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎಸ್ಕಾಂಗಳೊಂದಿಗೆ ಪರಿಶೀಲಿಸಿ ಪ್ರಗತಿ ಚುರುಕುಗೊಳಿಸಲು ಅಗತ್ಯ ಕ್ರಮಕ್ಕೆ ಆದೇಶ ನೀಡಲಾಗಿದೆ ಎಂದು ಹೇಳಿದರು.ಪಶುಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ, ನಿಗಮಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಗಂಗಾಕಲ್ಯಾಣ ಯೋಜನೆಯಡಿ 5 ಫಲಾನುಭವಿಗಳಿಗೆ ಪಂಪ್, ಮೋಟಾರ್, ಪುನಶ್ಚೇತನ ಯೋಜನೆಯಡಿ 1.68 ಲಕ್ಷ ರೂಪಾಯಿ ಮೊತ್ತದ ಚೆಕ್ಕುಗಳನ್ನು 5 ಫಲಾನುಭವಿಗಳಿಗೆ, ಸಾಂಪ್ರದಾಯಿಕ ಯೋಜನೆಯಡಿ 5 ಫಲಾನುಭವಿಗಳಿಗೆ ರೂ. 80 ಸಾವಿರ ಮೊತ್ತದ ಚೆಕ್, ನ್ಯೂ ಸ್ವರ್ಣಿಮಾ ಯೋಜನೆಯಡಿ 3 ಸ್ತ್ರೀಶಕ್ತಿ ಗುಂಪುಗಳ 35 ಫಲಾನುಭಗಳಿಗೆ ರೂ.3.25 ಲಕ್ಷ ಸಾಲದ ಚೆಕ್ ವಿತರಿಸಿದರು.ಇದಲ್ಲದೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಇಬ್ಬರು ಫಲಾನುಭವಿಗಳಿಗೆ ತಲಾ ರೂ. 3.67 ಲಕ್ಷ ಮತ್ತು ಟಾಟಾ ಇಂಡಿಕಾ ಕಾರ್, ಒಬ್ಬ ಫಲಾನುಭವಿಗೆ ರೂ. 7 ಲಕ್ಷ ಮೊತ್ತದ ಟಾವೇರ್ ಕಾರ್ ಹಾಗೂ ಗಂಗಾಕಲ್ಯಾಣ ಯೋಜನೆಯ 6 ಫಲಾನುಭವಿಗಳಿಗೆ ತಲಾ ರೂ. 1 ಲಕ್ಷ ಮೊತ್ತದ ಪಂಪ್, ಮೋಟಾರ್ ಇತರ ಸಾಮಗ್ರಿಗಳನ್ನು ಸಚಿವರು ವಿತರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.