ಗಂಗಾಕಲ್ಯಾಣ: ವಿದ್ಯುತ್ ಸಂಪರ್ಕಕ್ಕೆಕ್ರಮ

7

ಗಂಗಾಕಲ್ಯಾಣ: ವಿದ್ಯುತ್ ಸಂಪರ್ಕಕ್ಕೆಕ್ರಮ

Published:
Updated:

ಮೊಳಕಾಲ್ಮುರು: ಬೆಸ್ಕಾಂ ವಲಯ ವ್ಯಾಪ್ತಿಯಲ್ಲಿ ಬಾಕಿ ಇರುವ `ಗಂಗಾಕಲ್ಯಾಣ~ ಯೋಜನೆ ಕೊಳವೆ ಬಾವಿಗಳಿಗೆ ವಿದ್ಯುತ್ ಸಮಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ ತಿಳಿಸಿದರು.ಶುಕ್ರವಾರ ಇಲ್ಲಿನ ಸಾಮರ್ಥ್ಯಸೌಧದಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು. ಇಲಾಖೆ ಕುಡಿಯುವ ನೀರಿನ ಸಂಪರ್ಕಗಳಿಗೆ ವಿದ್ಯುತ್ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ಗಂಗಾಕಲ್ಯಾಣ ಯೋಜನೆ ಅಡಿ ಸಂಪರ್ಕ ಕಲ್ಪಿಸಲು ಹೊರಗುತ್ತಿಗೆ ನೀಡಲಾಗಿದೆ. ಅವರಿಗೆ ಮೂರು ತಿಂಗಳ ಗಡುವು ನೀಡಲಾಗಿದ್ದು, ಜುಲೈ ಅಂತ್ಯಕ್ಕೆ ಕಾರ್ಯ ಪೂರ್ಣಗೊಳಿಸಲಿದ್ದಾರೆ. ಒಟ್ಟು 71 ಕೊಳವೆಬಾವಿಗಳಿಗೆ ಸಂಪರ್ಕ ಕಲ್ಪಿಸಬೇಕಿದೆ ಎಂದು ತಿಳಿಸಿದರು.ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ನಂತರ ತಾಲ್ಲೂಕಿನ ಶಿಕ್ಷಕರ ಕೊರತೆ ನಿಖರ ಸಂಖ್ಯೆ ಸಿಗಲಿದೆ. ಜಿಲ್ಲೆಯಲ್ಲಿಯೇ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮಾತ್ರ ಖಾಲಿ ಹುದ್ದೆಗಳು ಇವೆ. ಈ ಪ್ರಕ್ರಿಯೆ ನಂತರ ಡಿಡಿಪಿಐ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷದಂತೆ ಗುತ್ತಿಗೆ ಶಿಕ್ಷಕರನ್ನು ನೇಮಕ ಮಾಡುವುದು ನಮ್ಮ ಕೈಯಲ್ಲಿ ಇಲ್ಲ. ಸರ್ಕಾರ ಅನುಮೋದನೆ ನೀಡಿದಲ್ಲಿ ಜೂನ್ ತಿಂಗಳ ಆರಂಭಕ್ಕೆ ನಿಯಮಾವಳಿ ಆಧಾರದಲ್ಲಿ ಗುತ್ತಿಗೆ ಶಿಕ್ಷಕರ ನೇಮಕ ಮಾಡಲಾಗುವುದು ಎಂದು ಹೇಳಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಕಾಂತರೆಡ್ಡಿ ಮಾತನಾಡಿ, ಪಟ್ಟಣದಲ್ಲಿ ತಾಲ್ಲೂಕು ಪಂಚಾಯ್ತಿಗೆ ಸೇರಿದ ಮಳಿಗೆಗಳ ಬಾಕಿ ಒಟ್ಟು ್ಙ 2.90 ಲಕ್ಷವಿದೆ, ಹಲವು ವರ್ಷಗಳಿಂದ ವಸೂಲಿ ಮಾಡಲು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಬಾಕಿ ವಸೂಲಿ ಮಾಡಬೇಕು ಎಂದು ಸೂಚಿಸಿದರು.ಜಿಲ್ಲಾ ಪಂಚಾಯ್ತಿ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿಗೆ ಬರ ಪರಿಹಾರ ಯೋಜನೆಯಲ್ಲಿ ್ಙ 137.4 ಲಕ್ಷ ಅನುದಾನ ಮಂಜೂರಾಗಿದೆ. ಈಗ ಮೂರನೇ ಹಂತದ ಕಾಮಗಾರಿಗಳು ನಡೆಯುತ್ತಿದ್ದು, ಕಾರ್ಯಕ್ರಮ ಸ್ಥಗಿತವಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ನಾಲ್ಕನೇ ಹಂತದ ಕಾರ್ಯ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಪದ್ಮಾವತಿ ಮಾಹಿತಿ ನೀಡುವಾಗ, ಸದಸ್ಯ ಶ್ರೀಕಾಂತರೆಡ್ಡಿ ಅವರು ತಾಲ್ಲೂಕಿನಲ್ಲಿ ಕಾರ್ಯ ಸ್ಥಳದಲ್ಲಿ ವಾಸ ಮಾಡುವ ವೈದ್ಯರ ವಿವರ ಬಯಸಿದರು. ಯಾರೂ ಇಲ್ಲ ಎಂಬ ಉತ್ತರ ಅಧಿಕಾರಿಯದಾಗಿತ್ತು.ತಾಲ್ಲೂಕು ಆರೋಗ್ಯಾಧಿಕಾರಿ, ಕೇಂದ್ರ ಸ್ಥಾನದಲ್ಲಿ ಇರುವುದಾಗಿ ದಾಖಲೆ ತೋರಿಸಿ ಪ್ರತಿ ತಿಂಗಳು ್ಙ 7-8 ಸಾವಿರ ಹೆಚ್ಚಿನ ಸಂಬಳ ಪಡೆಯುತ್ತಿದ್ದಾರೆ ಎಂದು ಸದಸ್ಯರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಪದ್ಮಾವತಿ, ಈ ಬಗ್ಗೆ ಮಾಹಿತಿ ಇದೆ ಕೂಡಲೇ, ಆ ವೈದ್ಯರಿಗೆ ನೋಟಿಸ್ ನೀಡುವುದಾಗಿ ತಿಳಿಸಿದರು.ರಸಗೊಬ್ಬರ ದಾಸ್ತಾನಿಗೆ ಕ್ರಮ ಕೈಗೊಳ್ಳಲಾಗಿದೆ. ಬಿತ್ತನೆ ಶೇಂಗಾಬೀಜ ದಾಸ್ತಾನಿಗೆ ಪಟ್ಟಣದಲ್ಲಿ ಕಟ್ಟಡ ಸಿಗುತ್ತಿಲ್ಲ. ಸದ್ಯಕ್ಕೆ ಒಂದು ಸಾವಿರ ಟನ್ ಶೇಂಗಾ ಬಂದಿದ್ದು, ಮುಂದಿನ ವಾರ  ವಿತರಣೆ ಮಾಡುವುದಾಗಿ ಕೃಷಿ ಇಲಾಖೆ ಅಧಿಕಾರಿ ತಿಳಿಸಿದರು.ಅಧ್ಯಕ್ಷೆ ಕವಿತಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಇಒ ಅಂಜನ್‌ಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry