ಗಂಗಾಧರ ಶ್ರೀಗಳಿಂದ ಶಿಕ್ಷಣ ಕ್ರಾಂತಿ ಶ್ಲಾಘನೀಯ

7

ಗಂಗಾಧರ ಶ್ರೀಗಳಿಂದ ಶಿಕ್ಷಣ ಕ್ರಾಂತಿ ಶ್ಲಾಘನೀಯ

Published:
Updated:

ಬೈಲಹೊಂಗಲ: ಆರೋಗ್ಯದ ಪರಿವಿಲ್ಲದೇ ಹಗಲಿರುಳು ಶ್ರಮಿಸಿ, ಕಡಿಮೆ ಅವಧಿಯಲ್ಲಿ ಶೈಕ್ಷಣಿಕ ಕ್ರಾಂತಿಗೈದ ಲಿಂ.ಗಂಗಾಧರ ಶ್ರೀಗಳ ಕಾರ್ಯ ಸ್ಮರಣೀಯ~ ಎಂದು ಮುರಗೋಡ ದುರದುಂಡೀಶ್ವರಮಠ ನೀಲಕಂಠ ಸ್ವಾಮೀಜಿ ಹೇಳಿದರು.ಭಾನುವಾರ ಲಿಂ.ಗಂಗಾಧರ ಸ್ವಾಮೀಜಿ ತೃತೀಯ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.  ಸಮಾಜದ ಪ್ರಗತಿಯಲ್ಲಿ ಸ್ವಾಮೀಜಿಗಳ ಪಾತ್ರ ಮಹತ್ವದ್ದಾಗಿದೆ  ಎಂದರು.ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ಈ ಭಾಗದ ಜನರಿಗೆ ಶಿಕ್ಷಣ ಜಾಗೃತಿ ಮೂಡಿಸಿ, ಶೈಕ್ಷಣಿಕ ಮಹತ್ವ ತಿಳಿಸಿದ ಗಂಗಾಧರ ಶ್ರೀಗಳ ನೆನಪು ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಮಾಜಿ ಸಂಸದ ಎಸ್.ಬಿ. ಸಿದ್ನಾಳ ಮಾತನಾಡಿ, `ಮಠಗಳು ಶಾಲಾ ಕೇಂದ್ರಗಳಾಗಿ ಬದಲಾಗುತ್ತಿದ್ದು, ಸಮಾಜಕ್ಕೆ ಧಾರ್ಮಿಕ ಸಂಸ್ಕಾರ ನೀಡುವ ಕಾರ್ಯಕ್ಕೆ ಮಠಾಧೀಶರು ಕಾಳಜಿ ವಹಿಸಬೇಕಾದ ಅಗತ್ಯವಿದೆ~ ಎಂದರು.ಉಪ್ಪಿನಬೆಟಗೇರಿಯ ವಿರೂಪಾಕ್ಷ ಸ್ವಾಮೀಜಿ, ಶ್ರೀಮಠದ ಉತ್ತರಾಧಿಕಾರಿ ನೀಲಕಂಠ ದೇವರು, ದೊಡವಾಡ ಹಿರೇಮಠ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮೈಸೂರ್ ಮಿನರಲ್ಸ್ ಲಿ. ಅಧ್ಯಕ್ಷ, ಶಾಸಕ ಜಗದೀಶ ಮೆಟಗುಡ್ಡ,  ಸಂಸದ ಸುರೇಶ ಅಂಗಡಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಿವೃತ್ತ ಆಯುಕ್ತ ವೈ.ಎಸ್.ಪಾಟೀಲ ಮಾತನಾಡಿದರು.ರುದ್ರಾಕ್ಷಿಮಠ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹೊಸೂರ ಮಡಿವಾಳೇಶ್ವರಮಠ ಗಂಗಾಧರ ಸ್ವಾಮೀಜಿ, ಇಂಗಳೇಶ್ವರಮಠ ಚೆನ್ನಬಸವ ಸ್ವಾಮೀಜಿ,  ನೀಲಕಂಠೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಕಾರ್ಯಾಧ್ಯಕ್ಷ ಚಂದ್ರಶೇಖರ ಸಾಧುನವರ, ನಿರ್ದೇಶಕರಾದ ಎಸ್.ಸಿ.ಮೆಟಗುಡ್ಡ, ಗುರುಸಿದ್ದಪ್ಪ ಹೂಲಿ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ, ಮಾಜಿ ಸಚಿವ ಶಿವಾನಂದ ಕೌಜಲಗಿ, ಯಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ, ಸದಸ್ಯ ಸುರೇಶ ಮೆಟಗುಡ್ಡ, ವಿ.ಬಿ.ಚಿನಗುಡಿ, ಕಾರ್ಯದರ್ಶಿ ಎಸ್.ಎಸ್. ಸಿದ್ನಾಳ ವೇದಿಕೆಯಲ್ಲಿದ್ದರು.ಪ್ರವಚನಕಾರ ಮೃತ್ಯುಂಜಯಸ್ವಾಮಿ ಹಿರೇಮಠ, ಕಲಾವಿದ ಗಂಗಾಧರ ಕಂಬಾರ ಪಾಲ್ಗೊಂಡಿದ್ದರು. ಸಿದ್ದರಾಮ ಶಾಸ್ತ್ರಿಗಳು ವೈದಿಕ ಕಾರ್ಯ ನಿರ್ವಹಿಸಿದರು. ಬಸವರಾಜ ಹುಬ್ಬಳ್ಳಿ ನಿರೂಪಿಸಿದರು. ಕುಂಚಬ್ರಹ್ಮ ವಿ.ಕೆ.ಬಡಿಗೇರ ನಿರ್ಮಿಸಿದ ಲಿಂ.ಗಂಗಾಧರ ಶ್ರೀಗಳ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.  ಸಾಮೂಹಿಕ ವಿವಾಹ ಜರುಗಿದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry