ಶನಿವಾರ, ಮೇ 8, 2021
23 °C
ಉದ್ಯೋಗ ಖಾತರಿ: ಪ್ರಯಾಸದ ಕೆಲಸ -ಆರೋಪ

ಗಂಗಾವತಿ: ಕಾರ್ಮಿಕರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ನರೇಗಾದಲ್ಲಿ ಕೆಲಸ ನೀಡುವಂತೆ ಒತ್ತಾಯಿಸಿದ್ದಕ್ಕೆ ಯಂತ್ರಕ್ಕೂ ಸಾಧ್ಯವಿಲ್ಲದಂತ ಗುಡ್ಡ ಅಗೆಯುವ ಕೆಲಸ ನೀಡಲಾಗಿದೆ ಎಂದು ಆರೋಪಿಸಿ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರು ಸಲಕರಣೆಗಳೊಂದಿಗೆ ಶನಿವಾರ ತಾಲ್ಲೂಕು ಪಂಚಾಯಿತಿ ಎದುರು ಧರಣಿ ನಡೆಸಿದರು.  ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಹೊಸಳ್ಳಿಯಿಂದ ಹಾರೆ, ಗುದ್ದಲಿ, ಸಲಕೆ ಮೊದಲಾದ ಸಲಕರಣೆಗಳನ್ನು ಮೆರವಣಿಗೆ ಮೂಲಕ ತಂದ ಕೂಲಿಕಾರರು, ಬಳಿಕ ತಾಲ್ಲೂಕು ಪಂಚಾಯಿತಿ ಆವರಣಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.ಈ ಬಗ್ಗೆ ಮಾಹಿತಿ ನೀಡಿದ ಕೂಲಿಕಾರರು, `ನೂರಾರು ಜನ ಕೆಲಸಕ್ಕೆ ಅರ್ಜಿ ಸಲ್ಲಿಸಿದರೂ ಕಳೆದ ನಾಲ್ಕು ವರ್ಷಗಳಿಂದ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಯಾರಿಗೂ ಕೆಲಸ ನೀಡಿಲ್ಲ.`ಕೆಲಸ ನೀಡುವಂತೆ ಒತ್ತಾಯಿಸಿ ಇತ್ತೀಚೆಗೆ ನಾವೆಲ್ಲಾ ಧರಣಿ ನಡೆಸಿದ್ದೆವು. ಇದಕ್ಕೆ ಮಣಿದ ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿ, ಕೂಡಲೆ ಕೆಲಸ ನಿಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಶಿಫಾರಸುಮಾಡಿದ್ದರು' ಎಂದು ಕೂಲಿಕಾರರು ವಿವರಿಸಿದರು.`ಶನಿವಾರದಿಂದ ಕೆಲಸಕ್ಕೆ ಬರುವಂತೆ ಸೂಚಿಸಿದ ಅಧಿಕಾರಿಗಳು, ಹೊಸಳ್ಳಿ ಸಮೀಪ ಉದ್ದೇಶಿತ ಆಶ್ರಯ ಕಾಲೋನಿ ಬಳಿ ಭೂಮಿ ತೋರಿಸಿ ಅಗೆಯಲು ಹೇಳಿದ್ದಾರೆ. ಆದರೆ ಅಲ್ಲಿ ಸಲಕರಣೆಗಳಿಗೆ ಅಲ್ಲ, ಯಂತ್ರಗಳಿಗೂ ಕರಗದ ಕಲ್ಲು ಭೂಮಿಯಿದೆ' ಎಂದು ಕೂಲಿಕಾರರು ತಿಳಿಸಿದರು. ಕೆಲಸ ನಿರ್ವಹಿಸಲು ಕೂಡಲೆ ಪರ್ಯಾಯ ಸ್ಥಳ, ಕಾಮಗಾರಿ ತೋರಿಸಬೇಕು, ಸ್ಥಳದಲ್ಲಿ ಕೂಲಿಕಾರರಿಗೆ ನೆರಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಧರಣಿ ನಿರತ ಪ್ರತಿಭಟನಾಕಾರರು ಅಧಿಕಾರಿಗಳನ್ನು ಒತ್ತಾಯಿಸಿದರು.ನಾಗಮ್ಮ, ಮಲ್ಲಮ್ಮ, ಲಿಂಗಮ್ಮಗಡ್ಡಿ, ಫಕೀರಮ್ಮ, ದೇವೇಂದ್ರಪ್ಪ, ಶ್ರೀಕಾಂತಪ್ಪ, ಶರಣಪ್ಪ, ವಿರುಪಣ್ಣ, ಪಾಮಣ್ಣ, ಶಿವಲಿಂಗಮ್ಮ, ಬಸವರಾಜ ಆನೆಗೊಂದಿ, ಎ.ಎಲ್. ತಿಮ್ಮಣ್ಣ, ನಿರುಪಾದಿ ಬೆಣಕಲ್, ಜಿ. ಬಸವರಾಜ ಮೊದಲಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.