ಶುಕ್ರವಾರ, ಮೇ 7, 2021
26 °C

ಗಂಗಾ ಸ್ವಚ್ಛತೆ: ಜನಜಾಗೃತಿಗೆ ಜಲಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗಂಗಾ ನದಿ ರಕ್ಷಣೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕರೆ ನೀಡಿದ ಬೆನ್ನಲ್ಲೇ, ಗಂಗಾ ನದಿ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತ- ಟಿಬೆಟ್ ಗಡಿ ಭದ್ರತಾ ಪಡೆಯ ಪೊಲೀಸರು ಬುಧವಾರ ಜಲಸಾಹಸ ಕ್ರೀಡೆ (ರ‌್ಯಾಫ್ಟಿಂಗ್) ಆರಂಭಿಸಿದರು.ಗಂಗಾ ನದಿ ಹುಟ್ಟುವ ಗಂಗೋತ್ರಿಯಿಂದ ಸಾಗರ ಸೇರುವ ಗಂಗಾ ಸಾಗರದವರೆಗೆ 2,500 ಕಿ.ಮೀ ಸಂಚರಿಸಲಿರುವ ಒಂದು ತಿಂಗಳ ಜಲಯಾನಕ್ಕೆ ಕೇಂದ್ರದ ಗೃಹ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಚಾಲನೆ ನೀಡಿದರು. ಪಡೆಯ 21 ಪೊಲೀಸ್ ತಂಡಗಳು ಈ ಕಾರ್ಯದಲ್ಲಿ ಭಾಗವಹಿಸಲಿವೆ.ಗಂಗಾ ನದಿ ಹರಿಯುವ ಸುಮಾರು ಐದು ರಾಜ್ಯಗಳ 50 ನಗರಗಳ ಮೂಲಕ ಹಾಯ್ದು ಹೋಗುವ ಈ ತಂಡದ ಸದಸ್ಯರು, ಜನಜಾಗೃತಿ ಮೂಡಿಸಲಿದ್ದಾರೆ. ಯಾನ ಮುಗಿದ ನಂತರ ಅನುಭವಗಳನ್ನು ಒಳಗೊಂಡ ಸಮಗ್ರ ವರದಿ ಸಲ್ಲಿಸುವಂತೆ ಸಚಿವ ಸಿಂಗ್ ಮನವಿ ಮಾಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.