ಸೋಮವಾರ, ಜನವರಿ 20, 2020
29 °C

ಗಂಗೂಲಿಗೆ ಬೆದರಿಕೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತಾ (ಪಿಟಿಐ): ನಿವೃತ್ತ ನ್ಯಾಯಮೂರ್ತಿ ಎ.ಕೆ.ಗಂಗೂಲಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬುರ್ದ್ವಾನ್‌ ನ್ಯಾಯಾಲಯದ ಮಹಿಳಾ ಕ್ಲರ್ಕ್‌ ಒಬ್ಬರು ಹಾಕಿರುವ ಬೆದರಿಕೆಯನ್ನು ಗಣನೆಗೆ ತೆಗೆದುಕೊಂಡಿರುವ  ಪಶ್ಚಿಮಬಂಗಾಳ ಮಾನವ ಹಕ್ಕು ಆಯೋಗ, ಈ ವಿಷಯವಾಗಿ ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ಪಶ್ಚಿಮಬಂಗಾಳ ನ್ಯಾಯಾಂಗ ಕ್ಲರ್ಕ್‌ ಮಂಡಳಿಗೆ ಸೂಚಿಸಿದೆ.‘ನೀವು ಸಿಪಿಎಂನಿಂದ ಲಾಭ ಪಡೆದುಕೊಂಡಿದ್ದೀರಿ. ನೀವು ವಿಶ್ವಾಸಕ್ಕೆ ಅರ್ಹರಲ್ಲ. ಮಮತಾ  ದೀದಿ ನಿಮಗೆ ಮನ್ನಣೆ ನೀಡಿದ್ದಾರೆ. ಆದರೆ ನೀವು ಅವರನ್ನು ಪೇಚಿಗೆ ಸಿಲುಕಿಸುತ್ತಿದ್ದೀರಿ. ನಾನು ನಿಮ್ಮ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುತ್ತೇನೆ. ಅಹಂಕಾರದಿಂದ ಮೆರೆಯಬೇಡಿ’ ಎಂದು ಆ ಮಹಿಳೆ ಸೆಪ್ಟೆಂಬರ್‌ 18ರಂದು ಗಂಗೂಲಿ ಅವರಿಗೆ ಪತ್ರ ಬರೆದಿದ್ದರು.

ಪ್ರತಿಕ್ರಿಯಿಸಿ (+)