ಬುಧವಾರ, ಜನವರಿ 22, 2020
17 °C

ಗಂಗೂಲಿ ನೆರವಿಗೆ ವಕೀಲರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತಾ(ಪಿಟಿಐ):  ಕಾನೂನು ತರಬೇತಿ ವಿದ್ಯಾರ್ಥಿನಿಗೆ ­ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಲುಕಿರುವ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯ­ಮೂರ್ತಿ ಎ.ಕೆ. ಗಂಗೂಲಿ ನೆರವಿಗೆ ಕೋಲ್ಕತ್ತ ಹೈಕೋರ್ಟ್‌ ವಕೀಲರು ಬುಧವಾರ ಧಾವಿಸಿದ್ದಾರೆ.ಗಂಗೂಲಿ ಅವರು ತಪ್ಪಿತಸ್ಥ ಎಂದು ಸಾಬೀತಾಗುವರೆಗೆ ಅಧಿಕಾರದಿಂದ ಕೆಳಗಿಳಿಸಬಾರದು ಎಂದು   ಹೈಕೋರ್ಟ್‌ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಕೀಲರು ಒತ್ತಾಯಿಸಿದರು.  ಹಿರಿಯ ವಕೀಲರಾದ ವಿಕಾಸ್‌ ಭಟ್ಟಾಚಾರ್ಯ ಮತ್ತು ಅರ್ನವ್‌ ಘೋಷ್‌ ನೇತೃತ್ವ ವಹಿಸಿದ್ದರು. ‘ಗಂಗೂಲಿ ಅವರ ವಿರುದ್ಧ ಆರೋಪ ದುರುದ್ದೇಶಪೂರಿತ ಎಂದು ಆರೋಪಿಸಿದರು.‘ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿರುವ ವಿದ್ಯಾರ್ಥಿನಿ ಈವರೆಗೆ ಎಫ್‌ಐಆರ್‌ ದಾಖಲಿಸಿಲ್ಲ.  ತನಿಖೆ ನಡೆಸಿರುವ ಸುಪ್ರೀಂಕೋರ್ಟ್‌ ಸಮಿತಿಗೆ ಅಧಿಕಾರವೇ ಇಲ್ಲ. ಅದರೂ ಅವರನ್ನು ಗುರಿಯಾಗಿರಿಸಿ­ಕೊಳ್ಳಲಾಗಿದೆ’ ಎಂದು ಭಟ್ಟಾಚಾರ್ಯ ಪ್ರಶ್ನಿಸಿದರು.

 

ಇನ್ನೊಂದು ಸುದ್ದಿ...

*ಗಂಗೂಲಿಗೆ ಬೆದರಿಕೆ ಪತ್ರ

ಪ್ರತಿಕ್ರಿಯಿಸಿ (+)