ಗಂಗೋತ್ರಿಯಲ್ಲಿ ಕ್ರಿಕೆಟಿಗರ ಅಭ್ಯಾಸ

7

ಗಂಗೋತ್ರಿಯಲ್ಲಿ ಕ್ರಿಕೆಟಿಗರ ಅಭ್ಯಾಸ

Published:
Updated:

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಕ್ರಿಕೆಟ್‌ ಪ್ರೇಮಿಗಳ ಮೊಬೈಲ್ ಫೋನ್ ಕ್ಯಾಮೆರಾಗಳ ಕಿಲಕಿಲ ಸದ್ದು!ಸೆಪ್ಟೆಂಬರ್‌ 25 ರಿಂದ 28ರವರೆಗೆ ಇಲ್ಲಿಯ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ನಡೆಯಲಿರುವ ‘ಎ‘ ಪಂದ್ಯದಲ್ಲಿ ಆಡಲಿರುವ ವೆಸ್ಟ್ ಇಂಡೀಸ್ ‘ಎ’ ತಂಡ ಮತ್ತು ಭಾರತ ‘ಎ’ ತಂಡಗಳ ಆಟ­ಗಾ­ರರ ಅಭ್ಯಾಸವನ್ನು ನೋಡಲು ಮಾನಸ­ಗಂಗೋತ್ರಿಯ ವಿದ್ಯಾರ್ಥಿಗಳ ದಂಡು ಸೇರಿತ್ತು.ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಅಭ್ಯಾಸ ನಡೆಸಿದ ಕಿರ್ಕ್ ಎಡ್ವರ್ಡ್ ಬಳಗವು ಬ್ಯಾಟಿಂಗ್‌, ಫಿಟ್ ನೆಸ್ ಮತ್ತು ಫೀಲ್ಡಿಂಗ್ ಅಭ್ಯಾಸ ನಡೆಸಿತು. ಕಿರನ್ ಪೋವೆಲ್ ಅವರು ಪ್ರೇಕ್ಷಕರ ಪ್ರಮುಖ ಆಕರ್ಷಣೆಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry